ADVERTISEMENT

ಚೀನಾ ದಾಳಿ ಖಂಡಿಸಿ ಅಮೆರಿಕದಲ್ಲಿ ಭಾರತೀಯರ ಪ್ರತಿಭಟನೆ

ಪಿಟಿಐ
Published 26 ಜೂನ್ 2020, 8:16 IST
Last Updated 26 ಜೂನ್ 2020, 8:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಪೂರ್ವ ಲಡಾಖ್‌‌ನಲ್ಲಿ ಚೀನಾ ನಡೆಸಿದ ಆಕ್ರಮಣವನ್ನು ಖಂಡಿಸಿ ಅಮೆರಿಕದಲ್ಲಿರುವ ಭಾರತೀಯರು ಷಿಕಾಗೋದಲ್ಲಿರುವ ಚೀನಾದ ಕಾನ್ಸುಲೇಟ್ ಕಚೇರಿ ಮುಂದೆ ಶುಕ್ರವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

‘ಭಾರತದ ಭೂಪ್ರದೇಶವಾದ ಲೇಹ್‌ನಲ್ಲಿ ಚೀನಾ ನಡೆಸಿದ ದಾಳಿ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ಸುಮ್ಮನೆ ಕೂರಲ್ಲ. ವಿಶ್ವ ಭಾರತದ ಪರವಾಗಿ ನಿಂತಿದೆ’ ಎಂದು ಡಾ. ಭರತ್‌ ಬರಾಯ್‌ ಅವರು ಆಕ್ರೋಶ ವ್ಯಕ್ತಪಡಿಸಿದರು.

ಗಾಲ್ವನ್‌ ಕಣಿವೆಯ ಉತ್ತರಕ್ಕಿರುವ ದೆಪ್ಸಾಂಗ್‌ ಪ್ರದೇಶದಲ್ಲಿ ಚೀನಾ ಸೈನಿಕರ ಜಮಾವಣೆಯನ್ನು ಹೆಚ್ಚಿಸಿದೆ. ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್ ಸರೋವರದ ದಂಡೆ, ದೌಲತ್‌ಬೇಗ್‌ ಓಲ್ಡಿಯಲ್ಲಿಯೂ ಚೀನಾದ ಸೈನಿಕರು ಭಾರಿ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.