ADVERTISEMENT

ಭಾರತ ಮೂಲದ ನಾಲ್ವರು ಅಮೆರಿಕನ್ನರು ಆಯ್ಕೆ

ಅಮೆರಿಕ: ರಾಜ್ಯ– ಸ್ಥಳೀಯ ಸಂಸ್ಥೆಗಳ ಚುನಾವಣೆ

ಪಿಟಿಐ
Published 7 ನವೆಂಬರ್ 2019, 20:30 IST
Last Updated 7 ನವೆಂಬರ್ 2019, 20:30 IST
ಸುಹಾಸ್‌, ಘಜಲಾ ಹಶ್ಮಿ, ಮನೋ ರಾಜು, ಡಿಂಪಲ್‌
ಸುಹಾಸ್‌, ಘಜಲಾ ಹಶ್ಮಿ, ಮನೋ ರಾಜು, ಡಿಂಪಲ್‌   

ವಾಷಿಂಗ್ಟನ್‌: ವರ್ಜೀನಿಯಾ ರಾಜ್ಯ ಹಾಗೂ ಸ್ಥಳೀಯ ಆಡಳಿತಕ್ಕೆ ನಡೆದ ಚುನಾವ ಣೆಯಲ್ಲಿ ಭಾರತ ಮೂಲದ ನಾಲ್ವರು ಅಮೆರಿಕ ನ್ನರು ಆಯ್ಕೆಯಾಗಿದ್ದಾರೆ.

ಈ ಪೈಕಿ ಒಬ್ಬ ಮುಸ್ಲಿಂ ಮಹಿಳೆ ಹಾಗೂ ಈ ಹಿಂದೆ ಶ್ವೇತಭವನದಲ್ಲಿ ತಂತ್ರಜ್ಞಾನ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಯೂ ಇದ್ದಾರೆ.

ಸಮುದಾಯ ಕಾಲೇಜೊಂದರ ನಿವೃತ್ತ ಪ್ರಾಧ್ಯಾಪಕಿ ಘಜಲಾ ಹಶ್ಮಿ ವರ್ಜೀನಿಯಾ ಸ್ಟೇಟ್‌ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌ಗೆ ಆಯ್ಕೆಯಾಗಿರುವ ಸುಹಾಸ್‌ ಸುಬ್ರಮಣ್ಯಂ ಅವರು ಬರಾಕ್‌ ಒಬಾಮ ಅಧ್ಯಕ್ಷರಾಗಿದ್ದ ಸಮಯದಲ್ಲಿ ಶ್ವೇತಭವನದ ತಂತ್ರಜ್ಞಾನ ನೀತಿ ಸಲಹೆಗಾರರಾಗಿದ್ದರು.

ADVERTISEMENT

ಸ್ಯಾನ್‌ ಫ್ರಾನ್ಸಿ ಸ್ಕೊದ ‘ಪಬ್ಲಿಕ್‌ ಡಿಫೆಂಡರ್‌’ ಸ್ಥಾನಕ್ಕೆ ಮನೋ ರಾಜು, ನಾರ್ಥ್ ಕ್ಯಾರೋಲಿನಾದ ಚಾರ್ಲಟ್‌ ಸಿಟಿ ಕೌನ್ಸಿಲ್‌ಗೆ ನಡೆದ ಚುನಾವಣೆಯಲ್ಲಿ ಡಿಂಪಲ್‌ ಅಜ್ಮೇರಾ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.