ADVERTISEMENT

ನೇಪಾಳಕ್ಕೆ ಮಿಲಿಟರಿ ವಸ್ತು ಹಸ್ತಾಂತರ

ಪಿಟಿಐ
Published 5 ಸೆಪ್ಟೆಂಬರ್ 2022, 16:12 IST
Last Updated 5 ಸೆಪ್ಟೆಂಬರ್ 2022, 16:12 IST
ಕಠ್ಮಂಡುವಿನಲ್ಲಿ ಸೋಮವಾರ ಭಾರತದ ಸೇನಾಪಡೆ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರಿಗೆ ಗೌರವ ರಕ್ಷೆ ನೀಡಲಾಯಿತು  –ಪಿಟಿಐ 
ಕಠ್ಮಂಡುವಿನಲ್ಲಿ ಸೋಮವಾರ ಭಾರತದ ಸೇನಾಪಡೆ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರಿಗೆ ಗೌರವ ರಕ್ಷೆ ನೀಡಲಾಯಿತು  –ಪಿಟಿಐ    

ಕಠ್ಮಂಡು: ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪ್ರಭು ರಾಮ್ ಶರ್ಮಾ ಅವರನ್ನು ಭೇಟಿ ಮಾಡಿ, ಮಾರಕವಲ್ಲದ ವಿವಿಧ ಮಿಲಿಟರಿ ವಸ್ತುಗಳನ್ನು ಹಸ್ತಾಂತರಿಸಿದರು.

ಐದು ದಿನಗಳ ಅಧಿಕೃತ ಭೇಟಿಗಾಗಿ ಭಾನುವಾರ ಇಲ್ಲಿಗೆ ಬಂದಿರುವ ಪಾಂಡೆ, ಮಿಲಿಟರಿ ನಾಯಕತ್ವ ಮತ್ತು ಎರಡೂ ದೇಶಗಳ ನಡುವಿನ ರಕ್ಷಣಾ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಸೋಮವಾರ ಸೇನಾ ಪ್ರಧಾನ ಕಚೇರಿಯಲ್ಲಿ ಗೌರವ ರಕ್ಷೆ ಸ್ವೀಕರಿಸಿದರು.

ಜನರಲ್ ಮನೋಜ್ ಪಾಂಡೆ ಅವರು ಸೇನಾ ಪೆವಿಲಿಯನ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಿದ್ದಾರೆ ಎಂದು ಮತ್ತೊಂದು ಟ್ವೀಟ್‌ ತಿಳಿಸಿದೆ.

ADVERTISEMENT

ನೇಪಾಳ ಮತ್ತು ಭಾರತದ ಸೇನಾ ಮುಖ್ಯಸ್ಥರ ಭೇಟಿ ವಿನಿಮಯ ಮತ್ತು ಎರಡೂ ಸೇನಾ ಮುಖ್ಯಸ್ಥರಿಗೆ ಗೌರವ ಜನರಲ್ ಎಂಬ ಪ್ರಶಸ್ತಿ ನೀಡುವ ದೀರ್ಘ ಸಂಪ್ರದಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.