ADVERTISEMENT

ಅಮೆರಿಕ: ನಕಲಿ ವೀಸಾ ಪ್ರಕರಣ, ಭಾರತ ಮೂಲದ ಸಿಇಒ ಬಂಧನ

ಏಜೆನ್ಸೀಸ್
Published 1 ಸೆಪ್ಟೆಂಬರ್ 2018, 14:33 IST
Last Updated 1 ಸೆಪ್ಟೆಂಬರ್ 2018, 14:33 IST
   

ನ್ಯೂಯಾರ್ಕ್‌: ಎರಡು ಪ್ರಮುಖ ಮಾಹಿತಿ ತಂತ್ರಜ್ಞಾನ(ಐಟಿ) ಸಂಸ್ಥೆಗಳಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ವೀಸಾ ವಂಚನೆಪ್ರಕರಣ ಸಂಬಂಧ ಅಮೆರಿಕದಲ್ಲಿ ಬಂಧಿಸಲಾಗಿದೆ.

ಸುಮಾರು 200 ಜನ ವಿದೇಶಿ ಉದ್ಯೋಗಿಗಳಿಗೆ ಎಚ್‌1ಬಿ ಸೇರಿದಂತೆ ಹಲವು ಪ್ರಕಾರದ ವೀಸಾಗಳನ್ನು ಸಿದ್ಧಪಡಿಸಿಕೊಡಲು ನಕಲಿ ದಾಖಲಿಗಳನ್ನು ಸೃಷ್ಟಿಸಿರುವ ಆರೋಪದಲ್ಲಿ, ಪ್ರದ್ಯುಮ್ನ ಕುಮಾರ್‌ ಸಮಾಲ್‌(49) ಅವರನ್ನು ವಶಕ್ಕೆ ಪಡೆಯಲಾಗಿದೆ.

ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಏಪ್ರಿಲ್‌ನಲ್ಲಿ ಮುಚ್ಚಿದ ಲಕೋಟೆಯಲ್ಲಿ ದೂರು ನೀಡಲಾಗಿತ್ತು. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸಮಾಲ್‌ ಅಮೆರಿಕದಿಂದ ಪಲಾಯನ ಮಾಡಿದ್ದರು. ಇದೀಗ ಅವರುವಾಷಿಂಗ್ಟನ್‌ನಲ್ಲಿರುವ ಶಿಯಾಟಲ್‌ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಅಲ್ಲಿನಅಧಿಕಾರಿಗಳು ಬಂಧಿಸಿದ್ದಾರೆ.

ADVERTISEMENT

2010 ಹಾಗೂ 2011ರಲ್ಲಿ ವಾಷಿಂಗ್ಟನ್‌ನ ಬೆಲ್‌ವ್ಯೂನಲ್ಲಿರುವ ಡಿವೆನ್ಸಿ ಹಾಗೂಎಜಿಮೆಟ್ರಿಸಂಸ್ಥೆಗಳ ಸಿಇಒ ಆಗಿ ನೇಮಕವಾಗಿದ್ದ ಸಮಾಲ್‌, ಹೇಗೆ ಅಕ್ರಮವೆಸಗಿದ್ದಾರೆ ಎನ್ನುವ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳಿಗೆ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುವ ಹಾಗೂ ಎಂಜಿನಿಯರ್‌ಗಳನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದ್ದವು.ಇದಲ್ಲದೆ ತಪ್ಪು ದಾಖಲೆಗಳನ್ನು ಸಲ್ಲಿಸುವ ಮೂಲಕ ಅಮೆರಿಕ ಸರ್ಕಾರಕ್ಕೆ ವಂಚನೆ ಮಾಡುವ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದವು ಎನ್ನಲಾಗಿದೆ. ಈ ಸಂಬಂಧ ಸಮಾಲ್ ತಮ್ಮ ಉದ್ಯೋಗಿಗಳಿಗೆ ನಿರ್ದೇಶಿಸುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಮೂಲಗಳ ಪ್ರಕಾರ ತನಿಖೆಯು 2015ರಲ್ಲಿಯೇ ಆರಂಭವಾಗಿತ್ತು.

ವೀಸಾ ವಂಚನೆಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ₹1.77 ಕೋಟಿ ವರೆಗೆ ದಂಡ ಮತ್ತು10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.