ಸಿಂಗಾಪುರ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಭಾರತದ ಪ್ರಜೆಯಾಗಿರುವ, ಸಿಂಗಾಪುರದ ಕಾಯಂ ನಿವಾಸಿಯೊಬ್ಬನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ಆರು ಛಡಿಯೇಟುಗಳ ಶಿಕ್ಷೆಯನ್ನು ವಿಧಿಸಲಾಗಿದೆ.
ಅಂಕಿತ್ ಶರ್ಮಾ ಶಿಕ್ಷೆಗೊಳಗಾದ ಅಪರಾಧಿ. 2023ರ ಮಾರ್ಚ್ 1ರಂದು ಚಾಂಗಿ ಸಿಟಿ ಪಾಯಿಂಟ್ ಮಾಲ್‌ನಲ್ಲಿ ಘಟನೆ ನಡೆದಿತ್ತು.
ನೇಮಕಾತಿ ಅಧಿಕಾರಿಯಾಗಿದ್ದ 31 ವರ್ಷದ ಮಹಿಳೆಯನ್ನು ಮಾಲ್‌ನ ಶುಶ್ರೂಷಕ ಕೊಠಡಿಗೆ ಎಳೆದೊಯ್ದಿದ್ದ ಅಂಕಿತ್ ಶರ್ಮಾ, ಲೈಂಗಿಕ ದೌರ್ಜನ್ಯ ಎಸಗಿದ್ದನು. ಸಹೋದ್ಯೋಗಿಯೊಬ್ಬರು ಅಂಕಿತ್ ಶರ್ಮಾ ಅವರ ಪ್ರೊಫೈಲ್ ನೀಡಿದ್ದರಿಂದ ಅವರನ್ನು ಅದೇ ಮೊದಲ ಬಾರಿಗೆ ಮಹಿಳೆ ಭೇಟಿಯಾಗಿದ್ದರು.
ಭೇಟಿಯ ಆರಂಭದಲ್ಲಿ ವೃತ್ತಿಪರ ಚರ್ಚೆಗಳು ನಡೆದಿತ್ತಾದರೂ, ನಂತರ ಈ ಮಾತುಕತೆಯನ್ನು ಲೈಂಗಿಕ ವಿಚಾರಗಳತ್ತ ಅಂಕಿತ್ ಶರ್ಮಾ ತಿರುಗಿಸಿದ್ದನು ಮತ್ತು ಮಹಿಳೆಯನ್ನು ಬಾರ್‌ಗೆ ಕರೆದಿದ್ದನು ಎಂದು ಕೋರ್ಟ್‌ಗೆ ಮಹಿಳೆಯ ಪರ ವಕೀಲರು ಮಾಹಿತಿ ನೀಡಿದ್ದಾರೆ.
ಈ ನಡುವೆ ಮಹಿಳೆಯು ಶೌಚಾಲಯಕ್ಕೆ ತೆರಳಿ ವಾಪಸಾದಾಗ, ಶರ್ಮಾ ಹೊರಗೆ ಕಾಯುತ್ತಾ ನಿಂತಿದ್ದು, ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.