ADVERTISEMENT

ನೇಪಾಳದಲ್ಲಿ ಹಿಮಪಾತ: ಭಾರತದ ಪರ್ವತಾರೋಹಿ ಸೇರಿದಂತೆ 12 ಮಂದಿಗೆ ಗಾಯ

Climber

ಪಿಟಿಐ
Published 26 ಸೆಪ್ಟೆಂಬರ್ 2022, 13:17 IST
Last Updated 26 ಸೆಪ್ಟೆಂಬರ್ 2022, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ನೇಪಾಳದ ಮೌಂಟ್‌ ಮಾನಾಸ್ಲು ಪರ್ವತದಲ್ಲಿ ಸೋಮವಾರ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಭಾರತದ ಪರ್ವತಾರೋಹಿ ಬಲ್‌ಜೀತ್ ಕೌರ್‌ ಸಹಿತ 12 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಕೌರ್‌ ಮತ್ತು ಅವರ ಜತೆಗಿದ್ದ ಶೆರ್ಪಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಮೌಂಟ್‌ ಮಾನಾಸ್ಲು ಪರ್ವತ ಜಗತ್ತಿನ ಎಂಟನೇ ಅತಿ ಎತ್ತರದ ಪರ್ವತವಾಗಿದ್ದು, ಜಗತ್ತಿನ ಐದು ಅತ್ಯಂತ ಅಪಾಯಕಾರಿ ಪರ್ವತಗಳಲ್ಲಿ ಇದೂ ಒಂದಾಗಿದೆ. ಈ ಪರ್ವತ ಏರಲು ಹೊರಟ 53 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.