ADVERTISEMENT

ಚಾರಣ ಕೈಗೊಂಡಾಗ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ಆರೋಗ್ಯ ಸ್ಥಿರ

ಪಿಟಿಐ
Published 14 ಡಿಸೆಂಬರ್ 2025, 15:40 IST
Last Updated 14 ಡಿಸೆಂಬರ್ 2025, 15:40 IST
   

ಕಠ್ಮಂಡು: ಲಲಿತ್‌ಪುರ ಜಿಲ್ಲೆಯ ಚಂಪಾದೇವಿ ಬೆಟ್ಟದಲ್ಲಿ ಚಾರಣ ಕೈಗೊಂಡಾಗ ದಿಢೀರ್‌ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ನವೀನ್‌ ಶ್ರೀವಾಸ್ತವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಉತ್ತರ ಕಠ್ಮಂಡುವಿನ ಚಂಪಾದೇವಿ ಬೆಟ್ಟ ಹತ್ತುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ನೇಪಾಳ ಸೇನಾ ಹೆಲಿಕಾಪ್ಟರ್‌ ಮೂಲಕ ಕಠ್ಮಂಡುವಿಗೆ ಕರೆತಂದು ಗ್ರ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನಂತರ ಶ್ರೀವಾಸ್ತವ ಅವರ ಸ್ಥಿತಿ ಸಾಮಾನ್ಯವಾಗಿದೆ. ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಡಿದಾದ ಪ್ರದೇಶವನ್ನು ಕ್ರಮಿಸುವಾಗ ಉಂಟಾಗಬಹುದಾದ ಆರೋಗ್ಯ ಸಮಸ್ಯೆ ಅವರಿಗೆ ಎದುರಾಗಿರಬಹುದು ಎಂದು ಶನಿವಾರ ಅವರನ್ನು ಏರ್‌ಲಿಫ್ಟ್‌ ಮಾಡಿದ ನಂತರ ಸೇನಾ ಅಧಿಕಾರಿಗಳು ತಿಳಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.