ADVERTISEMENT

ಅಮೆರಿಕ ವ್ಯಾಪಾರ ಸಮುದಾಯದೊಂದಿಗೆ ಕೋವಿಡ್‌ ಪರಿಸ್ಥಿತಿ ಚರ್ಚೆ: ತರಂಜೀತ್‌ ಸಂಧು

ಪಿಟಿಐ
Published 30 ಏಪ್ರಿಲ್ 2021, 6:05 IST
Last Updated 30 ಏಪ್ರಿಲ್ 2021, 6:05 IST
ತರಂಜೀತ್‍ ಸಿಂಗ್ ಸಂಧು
ತರಂಜೀತ್‍ ಸಿಂಗ್ ಸಂಧು   

ವಾಷಿಂಗ್ಟನ್‌: ಅಮೆರಿಕದಲ್ಲಿನ ಭಾರತೀಯ ರಾಯಭಾರಿತರಂಜೀತ್‍ ಸಿಂಗ್ ಸಂಧು ಅವರು ವ್ಯಾಪಾರ ಸಮುದಾಯದ ಸದಸ್ಯರೊಂದಿಗೆ ಭಾರತದ ಪ್ರಸ್ತುತ ಕೋವಿಡ್‌ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಅಮೆರಿಕದ ಚೇಂಬರ್‌ ಆಫ್‌ ಕಾಮರ್ಸ್‌ ಗುರುವಾರ ವರ್ಚುವಲ್‌ ಸಭೆಯನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ತರಂಜೀತ್‍ ಸಿಂಗ್ ಸಂಧು ಅವರು,‘ ಭಾರತಕ್ಕೆ ಬೇಕಾಗಿರುವ ಆಕ್ಸಿಜನ್‌ ಪೂರೈಕೆ ಪರಿಕರ, ಸಿಲಿಂಡರ್‌, ವೆಂಟಿಲೇಟರ್‌, ಆಮ್ಲಜನಕ ಉತ್ಪಾದನೆ ಮತ್ತು ರೆಮ್‌ಡಿಸಿವಿರ್ ಸೇರಿದಂತೆ ಕೋವಿಡ್‌ ಸಂಬಂಧಿತ ಔಷಧಿಗಳ ಪೂರೈಕೆಗಾಗಿ ಸಹಾಯ ಹಸ್ತ ಚಾಚಿರುವ ಚೇಬರ್‌ ಆಫ್‌ ಕಾಮರ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಭಾರತವು ಕೋವಿಡ್‌ ಸೋಂಕನ್ನು ಎದುರಿಸಲು ಚೇಂಬರ್‌ ಆಫ್‌ ಕಾಮರ್ಸ್‌ ತ್ವರಿತವಾಗಿ ಪ್ರತಿಕ್ರಿಯಿಸಿದೆ. ವಿವಿಧ ಉದ್ಯಮ ಸಂಸ್ಥೆಗಳನ್ನು ಜತೆಗೂಡಿಸುವ ಮೂಲಕ ಭಾರತಕ್ಕೆ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು ಅಮೆರಿಕದ ಸರ್ಕಾರಕ್ಕೆ ನೆರವಾಗಿದೆ’ ಎಂದು ಅವರು ಶ್ಲಾಘಿಸಿದರು.

ADVERTISEMENT

‘ಖಾಸಗಿ ವಲಯಗಳು ಕೂಡ ಹೆಚ್ಚುವರಿ ವೈದ್ಯಕೀಯ ಸಲಕರಣೆಗಳನ್ನು ರವಾನಿಸಿದೆ’ ಎಂದು ಅವರು ಹೇಳಿದರು.

‘ಫೈಜರ್‌ ಸಂಸ್ಥೆಯ ಸಿಇಒಆಲ್ಬರ್ಟ್ ಬೌರ್ಲಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದೇನೆ. ಭಾರತಕ್ಕೆ ಲಸಿಕೆ ಮತ್ತು ಆರೋಗ್ಯ ಸೇವೆಗೆ ಸಂಬಂಧಿಸಿದ ನೆರವುಗಳನ್ನು ಒದಗಿಸುವ ಬಗ್ಗೆ ಫೈಜರ್‌ ಸಿಇಒ ಅವರೊಂದಿಗೆ ಚರ್ಚೆ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.

‘ಆಮ್ಲಜನಕ ಪರಿಕರಗಳು ಮತ್ತು ಕೋವಿಡ್‌ ಸಂಬಂಧಿತ ಸಾಮಗ್ರಿಗಳನ್ನು ಹೊತ್ತ ಅಮೆರಿಕದ ಎರಡು ವಿಮಾನಗಳು ಭಾರತಕ್ಕೆ ತೆರಳಿವೆ. ಈ ಸಾಂಕ್ರಾಮಿಕವನ್ನು ಎದುರಿಸಲು ಭಾರತದ ಹೆಗಲಿಗೆ ಹೆಗಲುಕೊಟ್ಟು ನಿಂತಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಧನ್ಯವಾದಗಳು’ ಎಂದು ಸಂಧು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.