
ನ್ಯೂಯಾರ್ಕ್: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಾಲಕರಿಗೆ ಫೋರ್ಕ್‌ನಿಂದ ಇರಿದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಭಾರತೀಯರೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಷಿಕಾಗೋದಿಂದ ಜರ್ಮನಿಗೆ ಹೊರಟಿದ್ದ ಲುಫ್ತಾನ್ಸಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ವಿಮಾನವನ್ನು ಬೋಸ್ಟನ್ ಲೋಗನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಅಮೆರಿಕದ ಅಟಾರ್ನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಪಿ ಪ್ರಣೀತ್‌ಕುಮಾರ್ ಉಸಿರಿಪಳ್ಳಿ ಅವರು 17 ವರ್ಷದ ಬಾಲಕರೊಬ್ಬರ ಭುಜಕ್ಕೆ ಪೋರ್ಕ್‌ನಿಂದ ಚುಚ್ಚಿದ್ದಾರೆ. ಬಳಿಕ ಇನ್ನೊಬ್ಬ ಬಾಲಕನ ತಲೆಗೆ ಪೋರ್ಕ್‌ನಿಂದ ಇರಿದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಮೆರಿಕ ವಿಮಾನಯಾನ ವ್ಯಾಪ್ತಿಯಲ್ಲಿ ಪ್ರಯಾಣಿಸುವಾಗ ಸಹಪ್ರಯಾಣಿಕರ ಮೇಲೆ ಅಯುಧದಿಂದ ದಾಳಿ ನಡೆಸಿದ ಕಾರಣಕ್ಕೆ ಪ್ರಣೀತ್ ವಿರುದ್ಧ ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಣೆ ಮಾಡಲಾಗಿದೆ.
ಆರೋಪಿಯನ್ನು ಬಂಧಿಸಿ, ಫೆಡರಲ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.