ವಾಷಿಂಗ್ಟನ್: ಕೆನಡಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಟ್ರಕ್ ಓಡಿಸುತ್ತಿದ್ದ 21 ವರ್ಷದ ಭಾರತೀಯ ಪ್ರಜೆಯನ್ನು ಸುಮಾರು ₹18.86 ಕೋಟಿ ಮೌಲ್ಯದ ಗಾಂಜಾ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಮೆರಿಕದ ವಕೀಲರೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿ ಅರ್ಷದೀಪ್ ಸಿಂಗ್ ಆಗಿದ್ದು, ಆರೋಪ ಸಾಭೀತಾದರೆ ಕಡ್ಡಾಯವಾಗಿ ಕನಿಷ್ಠ ಐದು ವರ್ಷ ಅಥವಾ ಗರಿಷ್ಠ 40 ವರ್ಷ ಸಜೆ ಹಾಗೂ ಸುಮಾರು ₹ 37.73 ರೂಪಾಯಿ ದಂಡ ವಿಧಿಸಲಾಗುತ್ತದೆ.
ಕೆನಡಾ ಪರವಾನಗಿಯ ಫಲಕ ಹೊಂದಿದ್ದ ವಾಣಿಜ್ಯ ಟ್ರಕ್ ಅನ್ನು ನ್ಯೂಯಾರ್ಕ್ನಲ್ಲಿ ವಶಕ್ಕೆ ಪಡೆದು ಪರಿಶೀಲಿಸಿದಾಗ, ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.