ವಾಷಿಂಗ್ಟನ್: 2023ರ ಮೇ 22ರಂದು ಬಾಡಿಗೆ ಟ್ರಕ್‌ನೊಂದಿಗೆ ಶ್ವೇತಭವನದ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಭಾರತೀಯ ಸಾಯಿ ವರ್ಷಿತ್ ಕಂಡುಲಾಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ನಾಜಿ ಸಿದ್ಧಾಂತದಿಂದ ಪ್ರೇರೇಪಿತಗೊಂಡಿದ್ದ ಸಾಯಿ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿದ್ದ ಅಮೆರಿಕನ್ ಸರ್ಕಾರವನ್ನು ಉರುಳಿಸುವ ಗುರಿಯೊಂದಿಗೆ ದಾಳಿ ನಡೆಸಿದ್ದ ಎಂದು ನ್ಯಾಯಾಂಗ ಇಲಾಖೆಯು ತಿಳಿಸಿದೆ.
ಅಮೆರಿಕದ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿಗೊಳಿಸುವ ಯತ್ನ ನಡೆಸಿದ್ದ ಆರೋಪ ಹೊತ್ತಿದ್ದ ಕಂಡುಲಾ ತಪ್ಪೊಪ್ಪಿಕೊಂಡಿದ್ದರು. ಭಾರತದ ಚಂದಾ ನಗರದಲ್ಲಿ ಜನಿಸಿರುವ ಅವರು, ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.