ADVERTISEMENT

ಬ್ರಿಟನ್‌ ರಾಣಿ ಪಟ್ಟಕ್ಕೇರಿ 70 ವರ್ಷ: ಭಾರತೀಯ ಮೂಲದ ನಟನ ನೇತೃತ್ವದಲ್ಲಿ ಸಮಾರಂಭ

ಪಿಟಿಐ
Published 31 ಮೇ 2022, 13:21 IST
Last Updated 31 ಮೇ 2022, 13:21 IST
ರಾಣಿ ಎಲಿಜಬೆತ್ ಪಟ್ಟಕ್ಕೇರಿ 70 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೃತ್ಯಾಭ್ಯಾಸ ಮಾಡುತ್ತಿರುವ  ಕಲಾವಿದರು  –ಎಪಿ
ರಾಣಿ ಎಲಿಜಬೆತ್ ಪಟ್ಟಕ್ಕೇರಿ 70 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೃತ್ಯಾಭ್ಯಾಸ ಮಾಡುತ್ತಿರುವ  ಕಲಾವಿದರು  –ಎಪಿ   

ಲಂಡನ್‌: ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರು ಪಟ್ಟಕೇರಿ 70 ವರ್ಷ ಪೂರ್ಣಗೊಂಡಹಿನ್ನೆಲೆಯಲ್ಲಿ ಜೂನ್‌ 5ರಂದು ಲಂಡನ್‌ನ ಬಕ್ಕಿಂಗ್‌ಹ್ಯಾಂ ಪ್ಯಾಲೇಸ್‌ನಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.

ಭಾರತೀಯ ಮೂಲದ ನಟ ಅಜಯ್‌ ಛಾಬ್ರಾ ಮತ್ತು ಅವರ ಕಂಪನಿಈ ಅದ್ದೂರಿ ಸಮಾರಂಭದ ಹೊಣೆ ಹೊತ್ತಿದ್ದು, ಬಾಲಿವುಡ್‌ ವಿವಾಹ ಪಾರ್ಟಿಯಂತೆ ಕಾರ್ಯಕ್ರಮವನ್ನು ಆಯೋಜಿಸಲಿದೆ. ಅದಕ್ಕಾಗಿ 6 ಮೀಟರ್‌ ಉದ್ದದ ನಾಲ್ಕು ಸ್ತರದ ಕೇಕ್‌ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಸೀರೆಯನ್ನು ಸಿದ್ಧಪಡಿಸಲಾಗಿದೆ. ಕೇಕ್‌ನಲ್ಲಿರಾಣಿ ಎಲಿಜಬೆತ್‌ ಆಳ್ವಿಕೆಯ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ ಮತ್ತು ಅಮೃತ ಮಹೋತ್ಸವದ ಮೈಲುಗಲ್ಲುಗಳನ್ನು ಗುರುತಿಸಲಾಗಿದೆ.

ಎಲಿಜಬೆತ್‌ ಮತ್ತು ರಾಜಕುಮಾರ ಫಿಲಿಪ್‌ ಅವರ 1947ರಲ್ಲಿ ನಡೆದ ವೈಭವದ ವಿವಾಹ ಮಹೋತ್ಸವನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ನಾಲ್ಕು ದಿನಗಳ ಸಮಾರಂಭದಲ್ಲಿ 7 ದಶಕದ ಆಳ್ವಿಕೆಯಲ್ಲಿನ ದಾಖಲೆಗಳು ಮತ್ತು ಸಾಮಾಜಿಕ ಪರಿವರ್ತನೆಯನ್ನು ವಿವಿಧ ರೀತಿಯಲ್ಲಿ ಮರುಸೃಷ್ಟಿಸುವ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.