ADVERTISEMENT

ಗ್ಲಾಸ್ಗೊ ಹವಾಮಾನ ಬದಲಾವಣೆ ಶೃಂಗ ಸಭೆಯಲ್ಲಿ ಭಾರತೀಯ ಕಲಾವಿದನ ಸಿನಿಮಾ ಪ್ರದರ್ಶನ

ಪಿಟಿಐ
Published 29 ಅಕ್ಟೋಬರ್ 2021, 6:56 IST
Last Updated 29 ಅಕ್ಟೋಬರ್ 2021, 6:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಲಂಡನ್‌ ನಿವಾಸಿ ಭಾರತೀಯ ಮೂಲದ ಕಲಾವಿದ ಮತ್ತು ಸಂಗೀತಗಾರ ಸೌಮಿಕ್ ದತ್ತಾ ಅವರು ಹವಾಮಾನ ಬದಲಾವಣೆ ಕುರಿತು ಸಿದ್ಧಪಡಿಸಿರುವ, ಚೊಚ್ಚಲ ನಿರ್ದೇಶನದ ‘ಸಾಂಗ್ಸ್ ಆಫ್ ದಿ ಅರ್ಥ್’ ಸಿನಿಮಾ ಮುಂದಿನ ವಾರ ಗ್ಲಾಸ್ಗೊದಲ್ಲಿ ನಡೆಯುವ ವಿಶ್ವಸಂಸ್ಥೆಯ ಮಹಾ ಅಧಿವೇಶನದ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (ಸಿಒಪಿ26) ಪ್ರದರ್ಶನಗೊಳ್ಳಲಿದೆ.

ಬಹು ಶಿಸ್ತೀಯ ಕಲಾವಿದರಾಗಿರುವ ಸೌಮಿಕ್, ಫೆಬ್ರುವರಿಯಲ್ಲಿ ಹವಾಮಾನ ಬದಲಾವಾಣೆಗೆ ಕ್ರಮ ಕೈಗೊಳ್ಳುವ ಕುರಿತು ‘ಸಿನಿಮಾ ಮತ್ತು ಸಂಗೀತ‘ ಯೋಜನೆಗಾಗಿ ಬ್ರಿಟಿಷ್ ಕೌನ್ಸಿಲ್ ಕ್ಲೈಮೆಟ್ ಚೇಂಜ್ ಕ್ರಿಯೇಟಿವ್ ಕಮಿಷನ್‌ನಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇದೇ ಯೋಜನೆಯಡಿ ‌'ಸಾಂಗ್ಸ್ ಆಫ್ ದಿ ಅರ್ಥ್'– ಅನಿಮೇಷನ್ ಚಲನಚಿತ್ರ ಸಿದ್ಧವಾಗಿದೆ. ಈ ಚಿತ್ರದಲ್ಲಿ ಹವಾಮಾನ ಬದಲಾವಣೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡುವ ಎಂಟು-ಟ್ರ್ಯಾಕ್ ಆಲ್ಬಮ್, ಹವಾಮಾನ ವೈಪರೀತ್ಯದಿಂದಾಗುತ್ತಿರುವ ವಲಸೆ, ಸಾಗರ ಮಾಲಿನ್ಯ, ಅರಣ್ಯನಾಶ ಕುರಿತ ಸಂದೇಶಗಳಿವೆ. ಅದ್ಭುತವಾದ ನಿರೂಪಣೆ, ಹಾಡುಗಳು ಮತ್ತು ವಿಷಯವನ್ನು ಮನಸ್ಸಿನಾಳಕ್ಕೆ ಇಳಿಸುವಂತಹ ದೃಶ್ಯಗಳಿವೆ.

ADVERTISEMENT

ನವೆಂಬರ್ 2 ರಂದು ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಈ ಸಿನಿಮಾದ ಪ್ರೀಮಿಯರ್ ಪ್ರದರ್ಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.