
ಪಿಟಿಐ
ನ್ಯೂಯಾರ್ಕ್: ಭಾರತೀಯ ಮೂಲದ ಪುರೆವಾಲ್ ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಸಹೋದರ ಕೋರಿ ಬೌಮನ್ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಸಿನ್ಸಿನಾಟಿಯ ಮೇಯರ್ ಹುದ್ದೆಗೇರಿದ್ದಾರೆ.
ಇದರೊಂದಿಗೆ ಡೆಮಾಕ್ರಟ್‌ಗಳು ಸಿನ್ಸಿನಾಟಿಯ ಸ್ಥಳೀಯ ಸರ್ಕಾರದ ಹಿಡಿತವನ್ನು ಪಡೆದಿದ್ದಾರೆ ಮತ್ತು ಒಹಿಯೊನಲ್ಲಿ ಪುರೆವಾಲ್ ಅವರ ರಾಜಕೀಯ ಭವಿಷ್ಯವು ಉಜ್ವಲವಾಗುವ ಸೂಚನೆ ಲಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಮೆರಿಕದ ಅಟಾರ್ನಿಯ ವಿಶೇಷ ಸಹಾಯಕರಾಗಿದ್ದ ಪುರೆವಾಲ್ ಅವರು 2021ರಲ್ಲಿ ಮೊದಲಿಗೆ ಮೇಯರ್ ಆಗಿದ್ದರು.
ಪುರೆವಾಲ್ ಅವರ ತಾಯಿ ಟಿಬೆಟ್‌ನವರಾಗಿದ್ದು, ಸಣ್ಣ ವಯಸ್ಸಿನಲ್ಲಿಯೇ ಅಲ್ಲಿಂದ ಪಲಾಯನ ಮಾಡಿ ದಕ್ಷಿಣ ಭಾರತದ ನಿರಾಶ್ರಿತರ ಶಿಬಿರಗಳಲ್ಲಿ ಬೆಳೆದರು. ಅವರ ತಂದೆ ಪಂಜಾಬ್‌ನವರು.
ಪುರೆವಾಲ್ ಅವರು 2015ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.