
ಪಿಟಿಐ
ಸಿಂಗಪುರ: ರೋಗಿಗಳಿಗೆ ದೀರ್ಘಕಾಲದವರೆಗೆ ನಿದ್ದೆ ಮಾತ್ರೆಗಳನ್ನು ನೀಡುತ್ತಿದ್ದ ಆರೋಪದಡಿ ಸಿಂಗಪುರದಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ವ್ಯಕ್ತಿಗೆ 3 ವರ್ಷಗಳ ಕಾಲ ವೈದ್ಯಕೀಯ ವೃತ್ತಿ ಮಾಡದಂತೆ ನಿರ್ಬಂಧ ಹೇರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
35 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿರುವ ಡಾ.ಮಣೀಂದರ್ ಸಿಂಗ್ ಶಾಹಿ(61) ಅವರು 7 ರೋಗಿಗಳಿಗೆ ದೀರ್ಘಕಾಲದವರೆಗೆ ನಿದ್ದೆ ಮಾತ್ರೆಗಳನ್ನು ನೀಡಿದ್ದಾರೆ ಎಂದು ರುಜುವಾತಾದ ಹಿನ್ನೆಲೆ ಸಿಂಗಪುರ ಶಿಸ್ತು ನ್ಯಾಯಮಂಡಳಿ ನಿರ್ಬಂಧ ವಿಧಿಸಿದೆ.
ಸಿಂಗಪುರ ವೈದ್ಯಕೀಯ ಮಂಡಳಿ(ಎಸ್‌ಎಂಸಿ)ಯು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ನ್ಯಾಯಾಪೀಠವು, ವಿಚಾರಣೆ ತಡವಾದ ಹಿನ್ನೆಲೆ ಶಿಕ್ಷೆ ಪ್ರಮಾಣವನ್ನು ಕಡಿಮೆಗೊಳಿಸಬೇಕೆಂದು ಡಾ.ಸಿಂಗ್ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.