ADVERTISEMENT

ಅಮೆರಿಕ | ಕಾರಿನೊಳಗೆ ಗುಂಡಿನ ದಾಳಿ: ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿ ಸಾವು

ಪಿಟಿಐ
Published 23 ನವೆಂಬರ್ 2023, 12:49 IST
Last Updated 23 ನವೆಂಬರ್ 2023, 12:49 IST
<div class="paragraphs"><p>ಸಾವು</p></div>

ಸಾವು

   

– ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಕಾರಿನೊಳಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟ ಘಟನೆ ಅಮೆರಿಕದ ಓಹಿಯೋ ನಗರ‌ದಲ್ಲಿ ನಡೆದಿದೆ.

ADVERTISEMENT

ಆದಿತ್ಯ ಅದಲಖಾ (26) ಮೃತ ವಿದ್ಯಾರ್ಥಿ. ಆದಿತ್ಯ ಅವರ ಸಾವು ದುರಂತವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. 

ಆದಿತ್ಯ ಅವರು ಸಿನ್ಸಿನಾಟಿ ಮೆಡಿಕಲ್‌ ಸ್ಕೂಲ್‌ನಲ್ಲಿ ‘ಆಣ್ವಿಕ ಮತ್ತು ಅಭಿವೃದ್ಧಿ ಜೀವಶಾಸ್ತ್ರ’ (molecular and developmental biology) ವಿಷಯದಲ್ಲಿ 4ನೇ ವರ್ಷದ ಶಿಕ್ಷಣ ಪಡೆಯುತ್ತಿದ್ದರು ಎಂದು WXIX-TV ವರದಿ ತಿಳಿಸಿದೆ.

ನವೆಂಬರ್‌ 9ರಂದು ಸಿನ್ಸಿನಾಟಿ ಸಿಟಿ ಪೊಲೀಸರು ಕಾರಿನಲ್ಲಿ ಗುಂಡೇಟಿಗೆ ಒಳಗಾಗಿದ್ದ ಯುವಕನ್ನು ಕಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಸೇರಿಸಿದ ಎರಡು ದಿನದ ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ.

ಆದಿತ್ಯ ಅವರ ಕಾರುಗಳ ಮೇಲೆ ಹಲವು ಬಾರಿ ದಾಳಿ ಗುಂಡಿನ ದಾಳಿ ನಡೆಸಲಾಗಿದೆ. ಕಾರಿನ ಕಿಟಕಿಯ ಮೇಲೆ ಕನಿಷ್ಠ 3 ಗುರುತು ಕಾಣುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.