ADVERTISEMENT

ಸಿಂಗಪುರದ 9ನೇ ಅಧ್ಯಕ್ಷರಾಗಿ ಥರ್ಮನ್‌ ಷಣ್ಮುಗರತ್ನಂ ಪ್ರಮಾಣ ವಚನ ಸ್ವೀಕಾರ

ಪಿಟಿಐ
Published 14 ಸೆಪ್ಟೆಂಬರ್ 2023, 14:08 IST
Last Updated 14 ಸೆಪ್ಟೆಂಬರ್ 2023, 14:08 IST
ಥರ್ಮನ್‌ ಷಣ್ಮುಗರತ್ನಂ
ಥರ್ಮನ್‌ ಷಣ್ಮುಗರತ್ನಂ   

ಸಿಂಗಪುರ: ಭಾರತ ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್‌ ಷಣ್ಮುಗರತ್ನಂ ಅವರು ಸಿಂಗಪುರದ ಒಂಬತ್ತನೇ ಅಧ್ಯಕ್ಷರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಲ್ಲಿನ ‘ಇಸ್ತಾನಾ’ದಲ್ಲಿ ಭಾರತ ಮೂಲದ ಮುಖ್ಯ ನ್ಯಾಯಮೂರ್ತಿ ಸುಂದರೇಶ್‌ ಮೆನನ್‌ ಅವರು ಥರ್ಮನ್‌ ಅವರಿಗೆ ಪ್ರಮಾಣವಚನ ಬೋಧಿಸಿದರು.

ಸಮಾರಂಭದಲ್ಲಿ ಪ್ರಧಾನಿ ಲೀ ಸಿಯೆನ್‌ ಲೂಂಗ್‌, ಸಂಪುಟದ ಸದಸ್ಯರು, ಸಂಸದರು ಹಾಗೂ ಹಿರಿಯ ನಾಗರಿಕ ಅಧಿಕಾರಿಗಳು ಪಾಲ್ಗೊಂಡಿದ್ದರು.

ADVERTISEMENT

ಥರ್ಮನ್‌ ಅವರು ಆರು ವರ್ಷ ಅಧಿಕಾರದಲ್ಲಿರಲಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ತಮ್ಮ ಜೀವನದುದ್ದಕ್ಕೂ ಸೇವೆ ಸಲ್ಲಿಸಿದ ಥರ್ಮನ್‌ ಸಿಂಗಪುರದಲ್ಲೇ ಜನಿಸಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.