ADVERTISEMENT

ಕಳ್ಳತನ: ಲಂಡನ್‌ನಲ್ಲಿ ಭಾರತ ಮೂಲದ ವ್ಯಕ್ತಿಯ ಬಂಧನ

ಪಿಟಿಐ
Published 8 ಏಪ್ರಿಲ್ 2024, 13:27 IST
Last Updated 8 ಏಪ್ರಿಲ್ 2024, 13:27 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಲಂಡನ್‌: ‘ಪಶ್ಚಿಮ ಲಂಡನ್‌ನ ಹೌನ್‌ಸ್ಲೋ ಅಂಚೆ ಕಚೇರಿಯಲ್ಲಿ ಹಣ ಕಳವು ಮಾಡಿದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ಸ್ಕಾಟ್ಲೆಂಡ್‌ ಯಾರ್ಡ್‌ ಸೋಮವಾರ ಹೇಳಿದೆ.

‘ರಾಜ್‌ವಿಂದರ್ ಕಹ್ಲೋನ್‌ ಬಂಧಿತ ವ್ಯಕ್ತಿ. ಏಪ್ರಿಲ್‌ 1ರಂದು ಅಂಚೆ ಕಚೇರಿಗೆ ಬಂದೂಕಿನೊಂದಿಗೆ ನುಗ್ಗಿದ ಆರೋಪಿ, ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಅಪಾರ ಪ್ರಮಾಣದ ಹಣ ಕಳ್ಳತನ ಮಾಡಿದ್ದ ಎಂದು ಹೇಳಲಾಗಿದೆ. ಕಳ್ಳತನವಾದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಪೊಲೀಸರು ಮತ್ತು ಗುಪ್ತಚರ ವಿಭಾಗದವರು ಕಾರ್ಯಪ್ರವೃತ್ತರಾಗಿದ್ದರು’ ಎಂದು ಮೆಟ್ರೊಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪೊಲೀಸರು ಮತ್ತು ಗುಪ್ತಚರ ವಿಭಾಗದವರು ಕಳ್ಳನ ಗುರುತನ್ನು ಪತ್ತೆಹಚ್ಚಿ, ಏಪ್ರಿಲ್‌ 4ರಂದು ರಾಜ್‌ವಿಂದರ್‌ನನ್ನು ಬಂಧಿಸಿದ್ದರು. ಏಪ್ರಿಲ್‌ 6ರಂದು ಕಳ್ಳತನ ಮತ್ತು ಬಂದೂಕು ಹೊಂದಿದ್ದ ಆರೋಪದ ಮೇಲೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು’ ಎಂದೂ ಅವರು ಮಾಹಿತಿ ನೀಡಿದರು.

‘ಪ್ರಸ್ತುತ ರಾಜ್‌ವಿಂದರ್‌ ಕಸ್ಟಡಿಯಲ್ಲಿದ್ದು, ಮೇ 6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.