ADVERTISEMENT

‌ವಾಷಿಂಗ್ಟನ್‌ | ರಸ್ತೆ ಅಪಘಾತ: ಭಾರತ ಮೂಲದ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 13:53 IST
Last Updated 2 ಜೂನ್ 2023, 13:53 IST
.
.   

ವಾಷಿಂಗ್ಟನ್‌: ಓಹಿಯೋ ರಾಜ್ಯದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತ ಮೂಲದ ಮಿಲನ್‌ ಹಿತೇಶ್ ಭಾಯ್‌ ಪಟೇಲ್‌ (30) ಸಾವನ್ನಪ್ಪಿದ್ದಾರೆ.

ಮಂಗಳವಾರ ಬೆಳಗಿನ ಜಾವ 4.30ರ ವೇಳೆ ಪಟೇಲ್ ಒಬ್ಬರೇ ಹೋಗುವಾಗ ಕಾರು ಕಂದಕಕ್ಕೆ ಬಿದ್ದಿದೆ, ಅವರು ಕಾರು ಚಲಾಯಿಸುವ ವೇಳೆ ಸೀಟ್ ಬೆಲ್ಟ್‌ ಧರಿಸಿರಲಿಲ್ಲ, ಅಪಘಾತದ ವೇಳೆ ಕಾರಿನೊಳಗೆ ಸಿಲುಕಿದ್ದರು, ಅವರನ್ನು ಹೊರತರಲು ಯತ್ನಿಸಿದರೂ ಬದುಕುಳಿಯಲಿಲ್ಲ. 

ಪಟೇಲ್‌ ಅವರು ಆಲ್ಕೊಹಾಲ್‌ ಅಥವಾ ಡ್ರಗ್ಸ್‌ ತೆಗೆದುಕೊಂಡಿದ್ದರೆ ಎನ್ನುವುದು ತಿಳಿಯಬೇಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.