ADVERTISEMENT

ಲಂಡನ್‌: ಭಾರತ ಮೂಲದ ವ್ಯಕ್ತಿಗೆ 9 ವರ್ಷ ಸಜೆ

ಪಿಟಿಐ
Published 31 ಜುಲೈ 2023, 16:11 IST
Last Updated 31 ಜುಲೈ 2023, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ನೆರೆಮನೆಯ ವ್ಯಕ್ತಿಗೆ ದೊಣ್ಣೆಯಿಂದ ತೀವ್ರವಾಗಿ ಥಳಿಸಿದ್ದ ಭಾರತ ಮೂಲದ ವ್ಯಕ್ತಿಗೆ ಲಂಡನ್‌ನ ಕೋರ್ಟ್‌ 9 ವರ್ಷ ಸಜೆ ವಿಧಿಸಿ ಆದೇಶಿಸಿದೆ. 35 ವರ್ಷ ವಯಸ್ಸಿನ ರಿಷಿ ಕ್ಯಾಸ್ಸಿರಾಂ ಶಿಕ್ಷೆಗೊಳಗಾದವನು.

ಬೆಡ್‌ಫೋರ್ಡ್‌ಶೈರ್ ಪೊಲೀಸರ ಪ್ರಕಾರ, ಈತ ಲುಟೊನ್‌ನಲ್ಲಿ ತನ್ನ ಫ್ಲ್ಯಾಟ್‌ನ ನೆರೆಯ ಫ್ಲ್ಯಾಟ್‌ನ ನಿವಾಸಿಗೆ ಥಳಿಸಿದ್ದ. ಇದು, ಗಂಭೀರವಾದ ದಾಳಿ ಎಂದು ತನಿಖಾಧಿಕಾರಿ ಹೇಳಿದ್ದರು. ಲುಟೊನ್‌ನ ಕ್ರೌನ್‌ ನ್ಯಾಯಾಲಯವು ಈ ಸಂಬಂಧ ಜುಲೈ 21ರಂದು ಆದೇಶ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT