ADVERTISEMENT

ಮಹಿಳೆಗೆ ಲೈಂಗಿಕ ಕಿರುಕುಳ, ತಂದೆ ಮೇಲೆ ಹಲ್ಲೆ: ಭಾರತ ಮೂಲದ ವ್ಯಕ್ತಿಗೆ ಜೈಲು

ಪಿಟಿಐ
Published 21 ಡಿಸೆಂಬರ್ 2024, 4:28 IST
Last Updated 21 ಡಿಸೆಂಬರ್ 2024, 4:28 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಸಿಂಗಪುರ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ತಂದೆ ಮೇಲೆ ಹಲ್ಲೆ ನಡೆಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 25 ವರ್ಷದ ಭಾರತ ಮೂಲದ ವ್ಯಕ್ತಿಗೆ ಸಿಂಗಪುರ ನ್ಯಾಯಾಲವು 1 ವರ್ಷ 6 ತಿಂಗಳು ಹಾಗೂ 2 ವಾರ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಅರ್ಜುನ್ ರವಿ ಅವರು ತಮ್ಮ 64 ವರ್ಷದ ತಂದೆ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು. ಈ ಕುರಿತು ಸಲ್ಲಿಕೆಯಾಗಿದ್ದ ದೂರಿನನ್ವಯ  ವಿಚಾರಣೆಗೆ ಪೊಲೀಸರು ಮೇ 10ರಂದು ಅರ್ಜುನ್ ಇರುವ ಅಪಾರ್ಟ್‌ಮೆಂಟ್‌ ಬಳಿ ಬಂದು ನಿಂತಿದ್ದರೂ ಹಲ್ಲೆ ಮುಂದುವರಿಸಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ ಎಂದು ದಿ ಸ್ಟೈಟ್‌ ಟೈಮ್ಸ್‌ ವರದಿ ಮಾಡಿದೆ.

ADVERTISEMENT

ನಂತರ ಪೊಲೀಸರು ಅರ್ಜುನ್‌ನನ್ನು ಬಂಧಿಸಿ, ಅವರ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಮೂಗಿನ ಮೂಳೆ ಮುರಿದಿತ್ತು ಹಾಗೂ ದೇಹದ ಹಲವೆಡೆ ಗಾಯಗಳಾಗಿದ್ದವು. 

2023ರಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಲಿಟ್ಟಲ್‌ ಇಂಡಿಯಾ ಪ್ರದೇಶದಲ್ಲಿ 24 ವರ್ಷದ ಮಹಿಳೆಗೆ ಅರ್ಜುನ್ ಲೈಂಗಿಕ ಕಿರುಕುಳ ನೀಡಿದ್ದರ ಕುರಿತೂ ದೂರು ದಾಖಲಾಗಿತ್ತು. ಘಟನೆ ಕುರಿತು ಮಾಹಿತಿ ನೀಡಿದ ಉಪ ಸರ್ಕಾರಿ ಅಭಿಯೋಜಕ ಝೋ ಯಾಂಗ್, ‘ಬಜಾರ್ ಲೇನ್‌ನಲ್ಲಿರುವ ಬಫೆಲೊ ರಸ್ತೆಯಲ್ಲಿ 2023ರ ಮೇ 10ರಂದು ಸಾಗುತ್ತಿದ್ದ ಮಹಿಳೆಯೊಬ್ಬರಿಗೆ ಅರ್ಜುನ್ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೆದರಿದ ಮಹಿಳೆ ಕಿರುಚಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಅರ್ಜುನ್‌ ಅಲ್ಲಿಂದ ಪರಾರಿಯಾಗಿದ್ದರು’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಈ ಘಟನೆ ಕುರಿತು ಮಹಿಳೆ ವಿಡಿಯೊ ಹಾಗೂ ಚಿತ್ರಗಳನ್ನು ಪೊಲೀಸರಿಗೆ ನೀಡಿದ್ದರು. ಅದರ ಆಧಾರದ ಮೇಲೆ ಅರ್ಜುನ್‌ನನ್ನು ಪತ್ತೆ ಮಾಡಲಾಗಿತ್ತು’ ಎಂದಿದ್ದಾರೆ.

ಈ ಎಲ್ಲಾ ಆರೋಪಗಳು ಸಾಬೀತಾಗಿದ್ದರಿಂದ ಅರ್ಜುನ್‌ಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.