ADVERTISEMENT

ಡಬ್ಲಿನ್‌: ಭಾರತ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ

ಪಿಟಿಐ
Published 5 ಆಗಸ್ಟ್ 2025, 14:36 IST
Last Updated 5 ಆಗಸ್ಟ್ 2025, 14:36 IST
   

ಲಂಡನ್‌: ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನಲ್ಲಿ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ.

‍ಐರ್ಲೆಂಡ್‌ನಲ್ಲಿ 23 ವರ್ಷಗಳಿಂದ ವಾಸವಿರುವ ಲಖ್ವೀರ್‌ ಸಿಂಗ್‌ (40) ಅವರು 20ರ ಹರೆಯದ ಇಬ್ಬರು ಯುವಕರನ್ನು ಶುಕ್ರವಾರ ರಾತ್ರಿ ಕಾರಿನಲ್ಲಿ ಕೂರಿಸಿಕೊಂಡು ಬ್ಯಾಲಿಮುನ್‌ ಉಪನಗರದಲ್ಲಿರುವ ಪಾಪಿನ್‌ಟ್ರೀ ಬಳಿ ಬಿಟ್ಟಿದ್ದರು. ಈ ವೇಳೆ, ಕಾರಿನ ಬಾಗಿಲು ತೆಗೆದ ಯುವಕರು ಸಿಂಗ್‌ ಅವರ ತಲೆಗೆ ಬಾಟಲಿಯಿಂದ ಎರಡು ಬಾರಿ ಹೊಡೆದಿದ್ದಾರೆ. ಅವರು, ಅಲ್ಲಿಂದ ಓಡಿ ಹೋಗುವ ವೇಳೆ, ‘ನಿಮ್ಮ ಸ್ವಂತ ದೇಶಕ್ಕೆ ವಾಪಸ್‌ ಹೋಗು’ ಎಂದು ಕೂಗಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ಇಂತಹ ಘಟನೆಯನ್ನು ಕಂಡಿಲ್ಲ. ಈ ಘಟನೆ ನನ್ನಲ್ಲಿ ಭಯ ಹುಟ್ಟಿಸಿದೆ. ಮಕ್ಕಳು ಸಹ ಆತಂಕಗೊಂಡಿದ್ದಾರೆ’ ಎಂದು ಲಖ್ವೀರ್‌ ಸಿಂಗ್‌ ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಬ್ಯೂಮಾಂಟ್‌ ಆಸ್ಪತ್ರೆಯಲ್ಲಿ ಸಿಂಗ್‌ ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ. ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ’ ಎಂದು ಡಬ್ಲಿನ್‌ ಪೊಲೀಸ್‌ ವಕ್ತಾರ ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.