ನ್ಯೂಯಾರ್ಕ್: ಭಾರತ ಮೂಲದ ಮಹಿಳೆಯೊಬ್ಬರು ಚಾಕುವಿನಿಂದ ತನ್ನ 11 ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
‘ಯತಿನ್ ಮೃತ ಬಾಲಕ. ಈತನ ತಾಯಿ, 48 ವರ್ಷ ವಯಸ್ಸಿನ ಸರಿತಾ ರಾಮರಾಜು ಆರೋಪಿ. ಇವರ ವಿರುದ್ಧದ ಆರೋಪ ಸಾಬೀತಾದಲ್ಲಿ 26 ವರ್ಷ ಸಜೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿ ಜಿಲ್ಲೆಯ ಆಟಾರ್ನಿ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಪತಿಯಿಂದ ವಿಚ್ಛೇದನ ಪಡೆದ ಬಳಿಕ ಸರಿತಾ ಅವರು ಸಾಂಟಾ ಅನಾ ನಗರದಲ್ಲಿ ವಾಸಿಸುತ್ತಿದ್ದರು. ಮಗ ತನ್ನ ವಶದಲ್ಲಿ ಇದ್ದ ಅವಧಿಯಲ್ಲಿ ಡಿಸ್ನಿಲ್ಯಾಂಡ್‌ಗೆ ಮೂರು ದಿನದ ಪ್ರವಾಸ ತೆರಳಿದ್ದರು. ಮಾರ್ಚ್ 19ರಂದು ಆತನ ತಂದೆಯ ವಶಕ್ಕೆ ಮಗನ ಒಪ್ಪಿಸಬೇಕಿತ್ತು. ಅದೇ ದಿನ ಪೊಲೀಸರಿಗೆ ಕರೆ ಮಾಡಿ ‘ಮಗನನ್ನು ಕೊಂದಿದ್ದೇನೆ‘ ಎಂದು ತಿಳಿಸಿದ್ದರು.
ಪೊಲೀಸರು ಸ್ಥಳಕ್ಕೆ ತೆರಳಿದಾಗ ಕತ್ತು ಸೀಳಿದ ಸ್ಥಿತಿಯಲ್ಲಿ ಬಾಲಕನ ಶವ ಕಂಡುಬಂದಿತ್ತು. ‘ಸ್ಥಳದಲ್ಲಿ ಹಿಂದಿನ ದಿನ ಖರೀದಿಸಿದ್ದ ಚಾಕು ಸಿಕ್ಕಿದೆ. ಕೊಲೆ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.