ADVERTISEMENT

ಭಾರತೀಯ ಸಂಜಾತೆಯ ಮೃತದೇಹ ಪತ್ತೆ

ಪಿಟಿಐ
Published 17 ಜನವರಿ 2020, 19:44 IST
Last Updated 17 ಜನವರಿ 2020, 19:44 IST

ನ್ಯೂಯಾರ್ಕ್‌ : ಅಮೆರಿಕದ ಇಲಿನಾಯ್‌ನಲ್ಲಿ ಎರಡು ವಾರಗಳಿಂದ ನಾಪತ್ತೆಯಾಗಿದ್ದ 34 ವರ್ಷದ ಭಾರತೀಯ ಸಂಜಾತೆಯ ಮೃತದೇಹ ಆಕೆಯ ಕಾರಿನ ಡಿಕ್ಕಿಯಲ್ಲಿಯೇ ಪತ್ತೆಯಾಗಿದೆ. ಮಹಿಳೆಯ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಡಿಸೆಂಬರ್‌ 30ರಂದು ಜಿಮ್‌ಗೆಂದು ಕಾರಿನಲ್ಲಿ ಹೊರಟ ಸುರೇಲ್‌ ಡಾಬಾವಾಲಾ ಮರಳಿ ಮನೆಗೆ ಬಂದಿಲ್ಲ ಎಂದು ಅವರ ಕುಟುಂಬದವರು ಜನವರಿ 1ರಂದು ಶಾಮ್‌ಬರ್ಗ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಶಿಕಾಗೊ ಟ್ರಿಬ್ಯೂನ್‌ ವರದಿ ಮಾಡಿದೆ.

ಡಾಬಾವಾಲಾ ಕುಟುಂಬದವರು ನಿಯೋಜಿಸಿದ್ದ ಖಾಸಗಿ ಪತ್ತೆದಾರರು ಸುರೇಲ್‌ ಅವರ ಕಾರು ಶಿಕಾಗೊದ ವೆಸ್ಟ್‌ಗ್ಯಾರಿಫೀಲ್ಡ್‌ ಪಾರ್ಕ್‌ ಬಳಿ ನಿಂತಿರುವುದನ್ನು ಪತ್ತೆ ಮಾಡಿದ್ದಾರೆ. ಮೃತದೇಹವನ್ನು ಕಂಬಳಿಯಿಂದ ಸುತ್ತಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.