ADVERTISEMENT

ಕಾಂಗೊ ಸರೋವರದಲ್ಲಿ ಭಾರತೀಯನ ಶವ ಪತ್ತೆ

ಪಿಟಿಐ
Published 15 ಸೆಪ್ಟೆಂಬರ್ 2019, 1:25 IST
Last Updated 15 ಸೆಪ್ಟೆಂಬರ್ 2019, 1:25 IST
   

ವಿಶ್ವಸಂಸ್ಥೆ:ಶಾಂತಿಪಾಲನಾ ಪಡೆಯಲ್ಲಿದ್ದ ಭಾರತದ ಸದಸ್ಯ ಲೆ.ಕರ್ನಲ್‌ ಗೌರವ್‌ ಸೋಲಂಕಿ ಮೃತದೇಹಕಾಂಗೊದ ಸರೋವರದಲ್ಲಿ ಪತ್ತೆಯಾಗಿದೆ. ಅವರು ಕಯಾಕಿಂಗ್‌(ಒಬ್ಬರೇ ಪ್ರಯಾಣಿಸಬಹುದಾದಸಣ್ಣ ದೋಣಿ ಪ್ರಯಾಣ) ವೇಳೆ ಮುಳುಗಿದ್ದರುಎಂದು ವಿಶ್ವಸಂಸ್ಥೆ ಮುಖ್ಯ ವಕ್ತಾರರು ತಿಳಿಸಿದ್ದಾರೆ.

ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊಗೆವಿಶ್ವಸಂಸ್ಥೆಯ ಮಿಷನ್‌ನಡಿ ಸೋಲಂಕಿ ಅವರನ್ನು ನಿಯೋಜಿಸಲಾಗಿತ್ತು. ಸೆಪ್ಟೆಂಬರ್‌ 8ರಂದು ಕಿವು ಸರೋವರಕ್ಕೆ ಕಯಾಕಿಂಗ್‌ನಲ್ಲಿ ತೆರಳಿದ್ದ ಅವರು ನಾಪತ್ತೆಯಾಗಿದ್ದರು.

‘ಕಾಂಗೊದಲ್ಲಿನ ಮಿಷನ್‌ ಸದಸ್ಯರುಮೃತದೇಹವನ್ನು ಗುರುತಿಸಿದ್ದಾರೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಫೀಫನ್‌ ಡುಜ್ಯಾರಿಕ್‌ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.