ADVERTISEMENT

ಅಮೆರಿಕ ಚುನಾವಣೆ: ಬೆಳಗಾವಿ ಮೂಲದ ಉದ್ಯಮಿ ಶ್ರೀಥಾಣೇದಾರ ಅವರಿಗೆ ಗೆಲುವು

ಮಿಷಿಗನ್ ಕ್ಷೇತ್ರದಿಂದ ಅಮೆರಿಕದ ಪ್ರತಿನಿಧಿ ಸಭೆಗೆ ಶ್ರೀಥಾಣೇದಾರ ಆಯ್ಕೆ

ಪಿಟಿಐ
Published 5 ನವೆಂಬರ್ 2020, 7:29 IST
Last Updated 5 ನವೆಂಬರ್ 2020, 7:29 IST
ಥಾಣೇದಾರ(ಚಿತ್ರ: ಥಾಣೇದಾರ ಟ್ವಿಟರ್ ಖಾತೆಯಿಂದ)
ಥಾಣೇದಾರ(ಚಿತ್ರ: ಥಾಣೇದಾರ ಟ್ವಿಟರ್ ಖಾತೆಯಿಂದ)   

ಹೂಸ್ಟನ್: ಕರ್ನಾಟಕದ ಬೆಳಗಾವಿ ಮೂಲದ ಅಮೆರಿಕ ನಿವಾಸಿ, ಶ್ರೀಮಂತ ಉದ್ಯಮಿ ಡೆಮಾಕ್ರಟಿಕ್ ಪಕ್ಷದ ಶ್ರೀಥಾಣೇದಾರ ಅವರು ಶೇ 93ರಷ್ಟು ಮತಗಳನ್ನು ಪಡೆಯುವ ಮೂಲಕ ಮಿಷಿಗನ್‌ ಕ್ಷೇತ್ರದಿಂದ ಅಮೆರಿಕದ ಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.

65ರ ಹರೆಯದ ವಿಜ್ಞಾನಿ ಮತ್ತು ಉದ್ಯಮಿ ಶ್ರೀಥಾಣೇದಾರ ಅವರು ಎರಡು ವರ್ಷಗಳ ಹಿಂದೆ ರಾಜ್ಯಪಾಲರ ಹುದ್ದೆಗೆ ಸ್ಪರ್ಧಿಸಿದ್ದರು.

ಥಾಣೇದಾರ ಅವರು, ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ 1979ರಲ್ಲಿ ಅಮೆರಿಕಕ್ಕೆ ತೆರಳಿದ ಅವರು ಅಕ್ರೋನ್ ವಿಶ್ವವಿದ್ಯಾಲಯ ಮತ್ತು ಮಿಷಿಗನ್‌ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.