ADVERTISEMENT

ವಿಶ್ವದಾದ್ಯಂತ ಸಂಭ್ರಮದ ಸ್ವಾತಂತ್ರ್ಯೋತ್ಸವ

ಶುಭಾಶಯ ವಿನಿಮಯ ಮಾಡಿದ ಅನಿವಾಸಿ ಭಾರತೀಯರು, ನೇಪಾಳಕ್ಕೆ 30 ಆಂಬ್ಯುಲೆನ್ಸ್ ಕೊಡುಗೆ

ಪಿಟಿಐ
Published 15 ಆಗಸ್ಟ್ 2019, 20:00 IST
Last Updated 15 ಆಗಸ್ಟ್ 2019, 20:00 IST
   

ಬೀಜಿಂಗ್‌/ಮೆಲ್ಬರ್ನ್‌/ಇಸ್ಲಾಮಾಬಾದ್‌: ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಗುರುವಾರಭಾರತದ 73ನೇ ಸ್ವಾತಂತ್ರ್ಯ ದಿನ ಆಚರಿಸಿ ಸಂಭ್ರಮಿಸಿದರು.

ಆಸ್ಟ್ರೇಲಿಯಾ, ಚೀನಾ, ಪಾಕಿಸ್ತಾನ, ಇಂಡೊನೇಷ್ಯಾ, ಸಿಂಗಪುರ, ಇಸ್ರೇಲ್‌ ಸೇರಿದಂತೆ ಹಲವು ದೇಶಗಳ ರಾಯಭಾರ ಕಚೇರಿಗಳಲ್ಲಿಸಂಭ್ರಮ ಮನೆ ಮಾಡಿತ್ತು.

ಬೀಜಿಂಗ್‌ನ ಭಾರತದ ರಾಯಭಾರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ರಾಯಭಾರಿ ವಿಕ್ರಂ ಮಿಸ್ರಿ, ಚೀನಾ ಮತ್ತು ಭಾರತ ದ್ವಿಪಕ್ಷೀಯ ಸಹಕಾರ ಸಂಬಂಧದ 70ನೇ ವರ್ಷಾಚರಣೆಯ ಸಂಭ್ರಮವನ್ನೂ ಹಂಚಿಕೊಂಡರು.

ADVERTISEMENT

ಆಸ್ಟ್ರೇಲಿಯಾಪ್ರಧಾನಿ ಸ್ಕಾಟ್‌ ಮಾರಿಸನ್‌ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದರು.ಮೆಲ್ಬರ್ನ್, ಕ್ಯಾನ್‌ಬೆರಾ, ಸಿಡ್ನಿ ಮತ್ತು ಪರ್ತ್‌ ನಗರಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಸೇರಿ ಸಂಭ್ರಮಪಟ್ಟರು.

ನೇಪಾಳದಲ್ಲಿನ ಭಾರತದ ರಾಯಭಾರ ಕಚೇರಿಯುಆಸ್ಪತ್ರೆಗಳಿಗೆ 30 ಆಂಬ್ಯುಲೆನ್ಸ್ ಮತ್ತು 4 ಬಸ್‌ಗಳನ್ನು ಕೊಡುಗೆಯಾಗಿ ನೀಡಿತು. ಇದಲ್ಲದೆ 40 ಗ್ರಂಥಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪುಸ್ತಕಗಳನ್ನು ಕೊಡುಗೆ ನೀಡಿರುವುದಾಗಿರಾಯಭಾರಿ ಮನ್‌ಜೀವ್‌ ಸಿಂಗ್‌ ಪುರಿ ತಿಳಿಸಿದರು.

ಸಿಂಗಪುರದಲ್ಲಿ ಸಾವಿರಕ್ಕೂ ಹೆಚ್ಚು ಭಾರತೀಯರು ಭಾರತದ ಐಎನ್‌ಎಸ್‌ ಸಾಗರ್‌ಧ್ವನಿ ನೌಕಾಪಡೆ ಅಧಿಕಾರಿಗಳೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿದರು.

ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಪವನ್‌ ಕಪೂರ್‌ ಧ್ವಜರೋಹಣ ನೆರವೇರಿಸಿರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಸಂದೇಶ ಓದಿದರು.

ಇಂಡೊನೇಷ್ಯಾ ಸ್ವಾತಂತ್ರ್ಯ ದಿನದ ಜೊತೆಗೆ ಭಾರತದ ಸ್ವಾತಂತ್ರ್ಯೋತ್ಸವವನ್ನು ಅಲ್ಲಿನಭಾರತೀಯರು ಆಚರಿಸಿದರು.ಯುಎಇ, ಶ್ರೀಲಂಕಾ, ಬಾಂಗ್ಲಾದೇಶ, ರಷ್ಯಾ, ಒಮನ್‌ ಮತ್ತು ಥಾಯ್ಲೆಂಡ್‌ಗಳಲ್ಲೂ ಸಂಭ್ರಮ ನೆಲೆಸಿತ್ತು.

ನೆದರ್ಲೆಂಡ್‌ನಲ್ಲೂ ಆಚರಣೆ

ದಿ ಹೇಗ್‌ನಲ್ಲಿರುವ ‘ಇಂಡಿಯಾ ಹೌಸ್‌’ನಲ್ಲಿ ದಾಖಲೆ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಸೇರಿ, ಸ್ವಾತಂತ್ರ್ಯ ದಿನ ಆಚರಿಸಿದರು. ವಾಸೆನಾರ್‌ನ ಮೇಯರ್‌ ಕ್ಯಾರೊಲಿನ್‌ ಹಾಜರಿದ್ದರು. ನೆದರ್ಲೆಂಡ್‌ ಮತ್ತು ಭಾರತದ 400 ವರ್ಷಗಳ ಸಂಬಂಧದ ಮಹತ್ವವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.