ADVERTISEMENT

UN COP30 Summit: ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಭೇಟಿಯಾದ ಯಾದವ್

ಪಿಟಿಐ
Published 20 ನವೆಂಬರ್ 2025, 2:33 IST
Last Updated 20 ನವೆಂಬರ್ 2025, 2:33 IST
<div class="paragraphs"><p>ಲಿಯು ಝೆನ್ಮಿನ್ ಮತ್ತು&nbsp;ಭೂಪೇಂದರ್ ಯಾದವ್</p></div>

ಲಿಯು ಝೆನ್ಮಿನ್ ಮತ್ತು ಭೂಪೇಂದರ್ ಯಾದವ್

   

ಬೆಲೆಮ್ (ಬ್ರೆಜಿಲ್): ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಝೆನ್ಮಿನ್ ಅವರನ್ನು ಭೇಟಿಯಾಗಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಗೆ (ಸಿಒಪಿ–30) ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

‘‌ಇಂದು ಬ್ರೆಜಿಲ್‌ನ ಬೆಲೆಮ್‌ನಲ್ಲಿ ಚೀನಾದ ಹವಾಮಾನ ಬದಲಾವಣೆಯ ವಿಶೇಷ ರಾಯಭಾರಿ ಲಿಯು ಝೆನ್ಮಿನ್ ಅವರನ್ನು ಭೇಟಿ ಮಾಡಿದೆ. ಇದೇ ವೇಳೆ ಪ್ಯಾರಿಸ್ ಒಪ್ಪಂದದ ಸಮಗ್ರತೆಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದು ಸೇರಿದಂತೆ ಅಭಿವೃದ್ಧಿಶೀಲ ದೇಶಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲಾಯಿತು’ ಎಂದು ಭೂಪೇಂದರ್ ಯಾದವ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಶೃಂಗಸಭೆಯ ವೇಳೆ ಕ್ಯೂಬಾದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಸಚಿವರನ್ನು ಭೇಟಿಯಾಗಿ ಸೌರ ಯೋಜನೆ ಅಭಿವೃದ್ಧಿ ಸೇರಿದಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಂಭಾವ್ಯ ಸಹಯೋಗದ ಕುರಿತು ಮಾತುಕತೆ ನಡೆಸಲಾಯಿತು ಎಂದು ಯಾದವ್ ವಿವರಿಸಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯು (ಸಿಒಪಿ–30) ಬ್ರೆಜಿಲ್‌ನ ಬೆಲೆಮ್‌ ನಗರದಲ್ಲಿ ನವೆಂಬರ್ 10ರಿಂದ ಆರಂಭವಾಗಿದ್ದು, ನ. 21ರವರೆಗೆ ನಡೆಯಲಿದೆ. ಈ ಬಾರಿಯ ಶೃಂಗಸಭೆಯಲ್ಲಿ 190ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.