ADVERTISEMENT

ಭಾರತದ ಆಶಾ ಕಾರ್ಯಕರ್ತೆಯರಿಗೆ ಡಬ್ಲ್ಯುಎಚ್‌ಒ ಗೌರವ

ಪಿಟಿಐ
Published 22 ಮೇ 2022, 20:06 IST
Last Updated 22 ಮೇ 2022, 20:06 IST
ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್   

ವಿಶ್ವಸಂಸ್ಥೆ/ಜಿನೀವಾ:ಭಾರತದ ಹತ್ತು ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಭಾನುವಾರ ಗೌರವ ಸಲ್ಲಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯಕ ಸೌಲಭ್ಯಗಳಿಗೆ ನೇರ ಸಂಪರ್ಕ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ಹಾಗೂ ಭಾರತದಲ್ಲಿ ಕೋವಿಡ್–19 ಸಾಂಕ್ರಾಮಿಕ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಅವಿರತ ಸೇವೆಗಾಗಿ ಈ ಗೌರವ ಸಂದಿದೆ.

ಜಾಗತಿಕಮಟ್ಟದಲ್ಲಿ ಆರೋಗ್ಯ ಸುಧಾರಣೆಯಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ಭಾನುವಾರ ಆರು ಪ್ರಶಸ್ತಿಗಳನ್ನು ಘೋಷಿಸಿ ಮಾತನಾಡಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ‘ಈ ಪ್ರಶಸ್ತಿ ಪುರಸ್ಕೃತರು ಜೀವಮಾನದ ಸಮರ್ಪಣೆ, ಪಟ್ಟುಬಿಡದ ಸಮರ್ಥನೆ, ಸಮಾನತೆಗೆ ಬದ್ಧತೆ ಮತ್ತು ಮಾನವೀಯತೆಯ ನಿಸ್ವಾರ್ಥ ಸೇವೆಯನ್ನು ಸಾಕಾರಗೊಳಿಸಿದ್ದಾರೆ’ ಎಂದು ಹೇಳಿದರು.

ADVERTISEMENT

2019ರಲ್ಲಿ ಈ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ಭಾನುವಾರ 75ನೇ ವಿಶ್ವ ಆರೋಗ್ಯ ಸಂಸ್ಥೆಯು ಆಯೋಜಿಸಿದ್ದ ಉನ್ನತಮಟ್ಟದ ಅಧಿವೇಶನದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ವರ್ಚುವಲ್ ಮೂಲಕ ಗೌರವ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.