ADVERTISEMENT

ಪರಿಸರ ಆರ್ಥಿಕ ತಜ್ಞ ಪವನ್‌ ಸುಖ್‌ದೇವ್‌ಗೆ ಟೈಲರ್‌ ಪ್ರಶಸ್ತಿ

ಪಿಟಿಐ
Published 28 ಜನವರಿ 2020, 20:00 IST
Last Updated 28 ಜನವರಿ 2020, 20:00 IST
ಪವನ್‌ ಸುಖ್‌ದೇವ್‌
ಪವನ್‌ ಸುಖ್‌ದೇವ್‌   

ವಿಶ್ವಸಂಸ್ಥೆ : ಪರಿಸರ ಆರ್ಥಿಕ ತಜ್ಞ ಪವನ್‌ ಸುಖ್‌ದೇವ್‌ ಅವರಿಗೆ ‘ಪರಿಸರ ನೊಬೆಲ್‌’ ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ‘ಟೈಲರ್‌ ಪ್ರಶಸ್ತಿ’ ದೊರೆತಿದೆ.

‘ಹಸಿರು ಆರ್ಥಿಕತೆ’ ಕುರಿತ ಅವರ ಸಂಶೋಧನೆ ಮತ್ತು ಕಾರ್ಯಗಳಿಗೆಪ್ರಶಸ್ತಿ ದೊರೆತಿದ್ದು, ಜೀವವಿಜ್ಞಾನಿ ಗ್ರೆಚೆನ್‌ ಡೈಲಿ ಅವರೊಂದಿಗೆ 2020ರ ಸಾಲಿನ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನೀಡುವ ಪ್ರಶಸ್ತಿಯು ಚಿನ್ನದ ಪದಕ, ₹1.43 ಕೋಟಿ ಒಳಗೊಂಡಿದ್ದು, ಮೇ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.