ADVERTISEMENT

ಮ್ಯಾನ್ಮಾರ್‌: ಚೇತರಿಕೆಯಲ್ಲಿ ಭಾರತದ ಪಾತ್ರ ಮಹತ್ವದ್ದು; ವಿಶ್ವಸಂಸ್ಥೆ

ಪಿಟಿಐ
Published 9 ಏಪ್ರಿಲ್ 2025, 13:08 IST
Last Updated 9 ಏಪ್ರಿಲ್ 2025, 13:08 IST
UNITED NATIONS LOGO
UNITED NATIONS LOGO   

ಮ್ಯಾಂಡಲೆ (ಮ್ಯಾನ್ಮಾರ್‌): ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಮಾನವೀಯ ನೆರವು ನೀಡುವಲ್ಲಿ ಭಾರತ ಪ್ರಮುಖ ಪಾತ್ರವಹಿಸಿದೆ. ಶೀಘ್ರ ಮತ್ತು ಗಣನೀಯ ನೆರವು ನೀಡುವ ಮೂಲಕ ‌ಮ್ಯಾನ್ಮಾರ್‌ ಸಹಜ ಸ್ಥಿತಿಗೆ ಮರಳಲು ಸಹಾಯ ಮಾಡಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಾರತವು ‘ಆಪರೇಷನ್‌ ರಾಮ’ ಯೋಜನೆಯಡಿ ಮ್ಯಾನ್ಮಾರ್‌ಗೆ ತ್ವರಿತ ಸಂಪನ್ಮೂಲಗಳನ್ನು ಒದಗಿಸಿದೆ. ಆಹಾರ, ಔಷಧ, ವೈದ್ಯಕೀಯ ನೆರವು ಸೇರಿದಂತೆ 1,000 ಮೆಟ್ರಿಕ್‌ ಟನ್‌ಗೂ ಹೆಚ್ಚು ಮಾನವೀಯ ನೆರವು ನೀಡಿದೆ’ ಎಂದು ಸಂದರ್ಶನವೊಂದರಲ್ಲಿ ಮ್ಯಾನ್ಮಾರ್‌ನಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಮುಖ್ಯಸ್ಥ ಸಜ್ಜದ್‌ ಮುಹಮ್ಮದ್‌ ಸಾಜಿದ್‌ ತಿಳಿಸಿದರು. 

ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ ನೆರವು ನೀಡಲು ಭಾರತವು ವೈದ್ಯಕೀಯ ಸಿಬ್ಬಂದಿ, 200 ಜನರನ್ನು ಒಳಗೊಂಡ ಶೋಧ ಮತ್ತು ರಕ್ಷಣಾ ತಂಡವನ್ನು ಕಳುಹಿಸಿದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.