ADVERTISEMENT

ಜಗತ್ತಿನ ಸ್ಥಿರತೆಗೆ ಭಾರತದ ಆರ್ಥಿಕ ಅಭಿವೃದ್ಧಿ ಆಧಾರವಾಗಿದೆ: ಸುಮನ್‌ ಬೆರಿ

ಪಿಟಿಐ
Published 22 ಜುಲೈ 2025, 16:12 IST
Last Updated 22 ಜುಲೈ 2025, 16:12 IST
ಸುಮನ್‌ ಬೆರಿ
ಸುಮನ್‌ ಬೆರಿ   

ವಿಶ್ವಸಂಸ್ಥೆ: ಭಾರತದ ನಿರಂತರ ಆರ್ಥಿಕ ಬೆಳವಣಿಗೆಯು ಜಗತ್ತಿನ ಸ್ಥಿರತೆಯ ಆಧಾರವಾಗಿದೆ. ಜಗತ್ತಿಗೆ ಪ್ರಗತಿ ಮತ್ತು ಅಭಿವೃದ್ಧಿಯ ಮಾದರಿಯ ಅಗತ್ಯವಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್‌ ಬೆರಿ ಅವರು ಹೇಳಿದ್ದಾರೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ರಾಜಕೀಯ ಸಂವಹನದಲ್ಲಿ ಬೆರಿ ಅವರು ಮಾತನಾಡಿದರು. 

‘ಜಗತ್ತು ಮಹತ್ತರ ಆರ್ಥಿಕ ಬದಲಾವಣೆ ಮತ್ತು ಅನಿಶ್ಚಿತತೆಗೆ ಒಳಗಾಗುತ್ತಿದೆ. ಇದು ಸುಸ್ಥಿರ ಅಭಿವೃದ್ಧಿಯ ಕುರಿತಾಗಿ ಅಂತರರಾಷ್ಟ್ರೀಯ ಸಮುದಾಯವು ಮತ್ತಷ್ಟು ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯ ಸೃಷ್ಟಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

2013–14ರಿಂದ 2022–23ವರೆಗಿನ 10 ವರ್ಷಗಳಲ್ಲಿ ಸುಮಾರು 24 ಕೋಟಿ 80 ಲಕ್ಷ ಜನರು ಬಡತನದಿಂದ ಪಾರಾಗಿದ್ದಾರೆಂದು ಅಂದಾಜಿಸಿರುವುದಾಗಿ ಬೆರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.