ADVERTISEMENT

ಪಾಕ್ ಮೂಲಕ ಅಫ್ಗಾನಿಸ್ತಾನಕ್ಕೆ ಭಾರತದ ಗೋಧಿ: ಫೆಬ್ರುವರಿಯಲ್ಲಿ ಸಾಗಣೆ ಆರಂಭ

ಪಿಟಿಐ
Published 29 ಜನವರಿ 2022, 10:48 IST
Last Updated 29 ಜನವರಿ 2022, 10:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಅಫ್ಗಾನಿಸ್ತಾನಕ್ಕೆ ಮಾನವೀಯ ನೆರವಿನ ಭಾಗವಾಗಿ ಪಾಕಿಸ್ತಾನದ ಮೂಲಕ ಭಾರತದ ಗೋಧಿ ಸಾಗಣೆಯು ಫೆಬ್ರುವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ಹಲವು ತಿಂಗಳುಗಳ ಕಾಲ ಚರ್ಚೆ ನಡೆಸಿ, ಗೋಧಿ ಸಾಗಣೆಗೆ ಸಂಬಂಧಿಸಿ ತೀರ್ಮಾನ ಕೈಗೊಂಡಿವೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಅಫ್ಗಾನಿಸ್ತಾನವನ್ನು ತಾಲಿಬಾನ್‌ ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ, ಆ ದೇಶದಲ್ಲಿ ಆಹಾರ–ಔಷಧಿ ಸೇರಿದಂತೆ ಅಗತ್ಯ ವಸ್ತುಗಳಿಗೆ ಸಮಸ್ಯೆ ಉಂಟಾಗಿದೆ. ಭಾರತ ಈಗಾಗಲೇ ಅಫ್ಗಾನಿಸ್ತಾನಕ್ಕೆ ಪಾಕಿಸ್ತಾನದ ರಸ್ತೆ ಮೂಲಕ 50 ಸಾವಿರ ಟನ್‌ ಗೋಧಿ ಮತ್ತು ಔಷಧೀಯ ನೆರವು ನೀಡುವುದಾಗಿ ಘೋಷಿಸಿದೆ.

ADVERTISEMENT

ಅದರಂತೆ, ಫೆಬ್ರವರಿಯಲ್ಲಿ ಗೋಧಿ ಸಾಗಣೆ ಪ್ರಾರಂಭವಾಗಲಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯಂತೆ, ಭಾರತವು ಗೋಧಿಯನ್ನು 30 ದಿನಗಳಲ್ಲಿ ಸಾಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.