ADVERTISEMENT

ಬಾಂಗ್ಲಾದೇಶ: ಭಾರತ –ಬಾಂಗ್ಲಾ ಪೈಪ್‌ಲೈನ್‌ ಯೋಜನೆ ಮುಂದಿನ ವರ್ಷ ಉದ್ಘಾಟನೆ

ಪಿಟಿಐ
Published 16 ಡಿಸೆಂಬರ್ 2021, 11:30 IST
Last Updated 16 ಡಿಸೆಂಬರ್ 2021, 11:30 IST
ಹರ್ಷ ವರ್ಧನ್‌ ಶ್ರಿಂಗ್ಲಾ
ಹರ್ಷ ವರ್ಧನ್‌ ಶ್ರಿಂಗ್ಲಾ   

ಢಾಕಾ, ಬಾಂಗ್ಲಾದೇಶ (ಪಿಟಿಐ): ಎರಡು ರಾಷ್ಟ್ರಗಳ ಇಂಧನ ಅಗತ್ಯಗಳನ್ನು ಪೂರೈಸುವ ಭಾರತ–ಬಾಂಗ್ಲಾದೇಶ ಪೈಪ್‌ಲೈನ್‌ ಯೋಜನೆಯ ಕಾಮಗಾರಿ ಕೆಲಸವು ಪ್ರಗತಿಯಲ್ಲಿದ್ದು ಮುಂದಿನ ವರ್ಷ ಉದ್ಘಾಟನೆಯಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಹೇಳಿದ್ದಾರೆ.

2018ರಲ್ಲಿ ಸಹಿ ಮಾಡಲಾದ ₹ 346 ಕೋಟಿ ಮೊತ್ತದ ಭಾರತ–ಬಾಂಗ್ಲಾದೇಶ ಮೈತ್ರಿ ಪೈಪ್‌ಲೈನ್‌ ಯೋಜನೆಯು (ಐಬಿಎಫ್‌ಪಿಪಿ) ಭಾರತದ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ದಿನಾಜ್‌ಪುರ ಜಿಲ್ಲೆಯ ಪರ್ಬಾತಿಪುರವನ್ನು ಸಂಪರ್ಕಿಸುತ್ತದೆ. 130 ಕಿ.ಮೀ. ಉದ್ದದ ಪೈಪ್‌ಲೈನ್‌ ವರ್ಷಕ್ಕೆ 10 ಲಕ್ಷ ಮೆಟ್ರಿಕ್‌ ಟನ್‌ ತೈಲ ಸಂಗ್ರಹಣೆಯ ಸಾಮರ್ಥ್ಯ ಹೊಂದಿದೆ.

‘ಈ ಪೈಪ್‌ಲೈನ್‌ ಯೋಜನೆಯು ವಿಶಿಷ್ಟ ಮತ್ತು ಮಹತ್ವದಾಗಿದ್ದು ಉಭಯ ರಾಷ್ಟ್ರಗಳು ತಮ್ಮ ಇಂಧನದ ಅಗತ್ಯಗಳನ್ನು ಪೂರೈಸಲು ಸಹಾಯವಾಗಿದೆ’ ಎಂದು ಶೃಂಗ್ಲಾ ಹೇಳಿದರು.

ADVERTISEMENT

‘ಪೈಪ್‌ಲೈನ್ ಯೋಜನೆಯ ಕಾಮಗಾರಿ ಉತ್ತಮವಾಗಿ ಪ್ರಗತಿಯಲ್ಲಿದೆ. ಆದ್ದರಿಂದ ನಾವು ಇದನ್ನು ಮುಂದಿನ ವರ್ಷ ಉದ್ಘಾಟಿಸುವ ಯೋಜನೆಯಲ್ಲಿದ್ದೇವೆ’ ಎಂದು ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬುಧವಾರ ಇಲ್ಲಿ ಬಾಂಗ್ಲಾದೇಶದ ನಾಯಕರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ಹೇಳಿದರು.

ಎರಡು ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭೇಟಿ ವೇಳೆ ರಾಷ್ಟ್ರಪತಿ ಕೋವಿಂದ್‌ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.