ADVERTISEMENT

ಇಂಡೊನೇಷ್ಯಾ: ಇಬ್ಬರು ಪತ್ರಕರ್ತರ ಹತ್ಯೆ

ಏಜೆನ್ಸೀಸ್
Published 4 ನವೆಂಬರ್ 2019, 16:30 IST
Last Updated 4 ನವೆಂಬರ್ 2019, 16:30 IST
   

ಮೆಡನ್‌, ಇಂಡೊನೇಷ್ಯಾ: ಭೂ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಿದ್ದ ಇಬ್ಬರು ಪತ್ರಕರ್ತರನ್ನು ಸುಮಾತ್ರ ದ್ವೀಪದ ಲಬುಹಾನ್‌ ಬಾಟು ಜಿಲ್ಲೆಯ ತಾಳೆ ಎಣ್ಣೆ ತೋಟವೊಂದರಲ್ಲಿ ಇರಿದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಕರ್ತರು, ತಾಳೆ ಎಣ್ಣೆ ಉತ್ಪಾದಿಸುವ ಕಂಪನಿ ಮತ್ತು ಸ್ಥಳೀಯ ನಿವಾಸಿಗಳ ಮಧ್ಯೆ ಉಂಟಾಗಿದ್ದ ಭೂ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಇದಕ್ಕೂ ಮೊದಲು, ತಾಳೆ ತೋಟಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಅಭಿಯಾನ ನಡೆಸಿದ್ದರು.

ಘಟನೆ ಸಂಬಂಧ ಆರು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಯಾವುದೇ ಸುಳಿವು ದೊರೆತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯನ್ನು ಇಂಡೊನೇಷ್ಯಾ ಪತ್ರಕರ್ತರ ಸಂಘ ಖಂಡಿಸಿದೆ.

ADVERTISEMENT

ಅಂಕಿ ಅಂಶ
124:
ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಇಂಡೊನೇಷ್ಯಾದ ಸ್ಥಾನ
24ಕ್ಕೂ ಹೆಚ್ಚು:ಪ್ರಸಕ್ತ ವರ್ಷದಲ್ಲಿ ಪತ್ರಕರ್ತರ ಮೇಲೆ ನಡೆದ ಕೊಲೆ, ಹಲ್ಲೆ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.