ADVERTISEMENT

ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ: ಆವರಿಸಿದ ಹೊಗೆ

ಏಜೆನ್ಸೀಸ್
Published 11 ಮಾರ್ಚ್ 2021, 8:08 IST
Last Updated 11 ಮಾರ್ಚ್ 2021, 8:08 IST
ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಿನಾಬಂಗ್‌‌ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಆವರಿಸಿರುವ ಬಿಸಿ ಮೋಡಗಳು
ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಿನಾಬಂಗ್‌‌ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಆವರಿಸಿರುವ ಬಿಸಿ ಮೋಡಗಳು   

ಮೌಂಟ್‌ ಸಿನಾಬಂಗ್‌: ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಿನಾಬಂಗ್ ಪರ್ವತದಲ್ಲಿ ಗುರುವಾರ ಜ್ವಾಲಾಮುಖಿ ಸ್ಫೋಟಿಸಿದ್ದು, ಮುಗಿಲೆತ್ತರಕ್ಕೆ ಬಿಸಿಮೋಡಗಳು ಆವರಿಸಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

‘ಉತ್ತರ ಸುಮಾತ್ರದ ಸಿನಾಬಂಗ್‌ ಪರ್ವತದಲ್ಲಿ ಉಂಟಾದ ಜ್ವಾಲಾಮುಖಿಯಿಂದಾಗಿ 1,000 ಮೀಟರ್‌ ಎತ್ತರಕ್ಕೆ ಹೊಗೆ ಮತ್ತು ಬೂದಿ ತುಂಬಿ ಹೋಗಿವೆ. ಅಲ್ಲದೆ 3 ಕಿ.ಮೀ ತನಕ ಬಿಸಿ ಮೋಡಗಳು ಆವರಿಸಿವೆ’ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ನಿರ್ವಹಣಾಕೇಂದ್ರ ತಿಳಿಸಿದೆ.

‘ಈವರೆಗೆ ಯಾವುದೇ ‍ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಜ್ವಾಲಾಮುಖಿ ಕಾಣಿಸಿಕೊಂಡ ಸ್ಥಳದಿಂದ 5 ಕಿ.ಮೀ.ನಷ್ಟು ದೂರವೇ ಇರಲು ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಶಿಲಾರಸ ಚಿಮ್ಮುವ ಸಾಧ್ಯತೆ ಇರುವುದರಿಂದ ಇದರ ಮೇಲೆ ನಿಗಾಯಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಿನಾಬಂಗ್‌ನ ಮೇಲ್ವಿಚಾರಣಾ ಕೇಂದ್ರದಅಧಿಕಾರಿ ಅರ್ಮೆನ್‌ ಪುತ್ರ ತಿಳಿಸಿದರು.

ADVERTISEMENT

ಕಳೆದ ಕೆಲವು ವರ್ಷಗಳಿಂದ ಆಗಾಗ ಸಂಭವಿಸುತ್ತಿರುವಸಿನಾಬಂಗ್‌ ಜ್ವಾಲಾಮುಖಿಯಿಂದಾಗಿ ಸುತ್ತಮುತ್ತಲಿನ 30 ಸಾವಿರಕ್ಕೂ ಅಧಿಕ ಸ್ಥಳೀಯರು ತಮ್ಮ ಮನೆಗಳನ್ನು ಬಿಟ್ಟು ಬಂದಿದ್ದಾರೆ. 2014ರಲ್ಲಿ ಭುಗಿಲೆದ್ದ ಲಾವಾರಸ17 ಮಂದಿಯನ್ನು ಬಲಿ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.