ADVERTISEMENT

ಶ್ರೀಲಂಕಾದ ಪ್ರವಾಹ ರಕ್ಷಣಾ ಕಾರ್ಯಕ್ಕೆ ಐಎನ್‌ಎಸ್‌ ವಿಕ್ರಾಂತ್‌ ನಿಯೋಜನೆ

ಪಿಟಿಐ
Published 28 ನವೆಂಬರ್ 2025, 13:37 IST
Last Updated 28 ನವೆಂಬರ್ 2025, 13:37 IST
INS Vikrant
INS Vikrant   

ಕೊಲಂಬೊ: ಭಾರತದ ಯುದ್ಧವಿಮಾನ ವಾಹಕನೌಕೆ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಶ್ರೀಲಂಕಾದ ಪ್ರವಾಹ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನವೆಂಬರ್‌ 30ರಂದು ಅಂತರರಾಷ್ಟ್ರೀಯ ನೌಕಾ ಸಮರಾಭ್ಯಾಸ–2025 ನಡೆಯಲಿದ್ದು, ಇದರ ತರಬೇತಿ ಭಾಗವಾಗಿ ಸದ್ಯ ಐಎನ್‌ಎಸ್‌ ವಿಕ್ರಾಂತ್‌ ಕೊಲಂಬೊ ಬಂದರನಲ್ಲೇ ಇದೆ. ಈ ನೌಕೆಯನ್ನು ಪೂರ್ವ ಕರಾವಳಿಯ ಟ್ರೆಂಕೊಮಾಲಿ ಪ್ರದೇಶದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು ಎಂದು ಶ್ರೀಲಂಕಾದ ನೌಕಾಪಡೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT