ADVERTISEMENT

ಮುಂದುವರೆದ ರಷ್ಯಾ ದಾಳಿ: ಉಕ್ರೇನ್‌ನ ಹಲವೆಡೆ ಇಂಟರ್‌ನೆಟ್‌ ಸಂಪರ್ಕಕ್ಕೆ ಅಡ್ಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2022, 11:31 IST
Last Updated 26 ಫೆಬ್ರುವರಿ 2022, 11:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೀವ್: ಉಕ್ರೇನ್‌ನಲ್ಲಿ ರಷ್ಯಾ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಂಟರ್‌ನೆಟ್‌‌ ಸೇವೆಗಳಿಗೆ ಅಡ್ಡಿಯುಂಟಾಗಿದೆ ಎಂದು ಅಂತರ್ಜಾಲ ನಿರ್ಬಂಧ ವೀಕ್ಷಣಾಲಯ ‘ನೆಟ್‌ಬ್ಲಾಕ್ಸ್’ ತಿಳಿಸಿದೆ. ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನ ಹಲವೆಡೆ ಇಂಟರ್‌ನೆಟ್‌ ಸಂಪರ್ಕದ ಮೇಲೆ ಕೆಟ್ಟ ಪರಿಮಾಣ ಬೀರಿದೆ. ವಿಶೇಷವಾಗಿ, ದೇಶದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳ್ಳುತ್ತಿದೆ ಎಂದು ನೆಟ್‌ಬ್ಲಾಕ್ಸ್‌ ಮಾಹಿತಿ ನೀಡಿದೆ.

ಉಕ್ರೇನ್‌ನ ಪ್ರಮುಖ ಇಂಟರ್‌ನೆಟ್‌ ಪೂರೈಕೆದಾರ ಕಂಪನಿ ‘ಗಿಗಾಟ್ರಾನ್ಸ್‌’ನ ಸಂಪರ್ಕದ ವೇಗವು ಸಾಮಾನ್ಯ ಮಟ್ಟಕ್ಕಿಂತ ಶೇ 20ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 198 ಪ್ರಜೆಗಳು ಹತ್ಯೆಯಾಗಿದ್ದಾರೆ. ಮೃತಪಟ್ಟ ಉಕ್ರೇನ್‌ ಪ್ರಜೆಗಳಲ್ಲಿ ಯೋಧರು, ನಾಗರಿಕರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಉಕ್ರೇನ್‌ ಆರೋಗ್ಯ ಸಚಿವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.