ADVERTISEMENT

ಇರಾನ್‌ನಲ್ಲಿ ಅಂತರ್ಜಾಲ ಸ್ಥಗಿತ

ಪೆಟ್ರೋಲ್ ದರ ಏರಿಕೆಗೆ ವಿರೋಧ, ಹಿಂಸಾಚಾರ: ವಾಣಿಜ್ಯ ವಹಿವಾಟಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 20:00 IST
Last Updated 23 ನವೆಂಬರ್ 2019, 20:00 IST
   

ಟೆಹರಾನ್‌ (ಎಎಫ್‌ಪಿ): ಪೆಟ್ರೋಲ್‌ ದರದ ತೀವ್ರ ಏರಿಕೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಇರಾನ್‌ನಲ್ಲಿ ಇಂಟರ್‌ನೆಟ್ ಸೇವೆಯನ್ನು ಕಳೆದ ಒಂದು ವಾರದಿಂದ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ, ನಾಗರಿಕರು ಪರದಾಡುತ್ತಿದ್ದಾರೆ.

ಇರಾನ್‌ ಮೇಲೆ ಅಮೆರಿಕ ನಿರ್ಬಂಧ ಹೇರಿದ ಪರಿಣಾಮ ಪೆಟ್ರೋಲ್‌ ದರವನ್ನು ಶೇಕಡ 200ರಷ್ಟು ಏರಿಕೆ ಮಾಡಲಾಗಿದ್ದು, ನವೆಂಬರ್‌ 15ರಂದು ಈ ಸಂಬಂಧ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಪ್ರತಿಭಟನೆ ಆರಂಭವಾಗಿತ್ತು.

ರಾಜಧಾನಿ ಟೆಹರಾನ್‌ನಲ್ಲಿ ಇಂಟರ್‌ನೆಟ್ ಅಲಭ್ಯತೆಯಿಂದ ಆಗಿರುವ ಸಮಸ್ಯೆಗಳಿಂದ ಹೊರಬರಲು ನಾಗರಿಕರು ಯತ್ನಿಸುತ್ತಿದ್ದಾರೆ. ‘ಒಂದೆರಡು ಕ್ಲಿಕ್‌ನಲ್ಲಿ ಆಗುತ್ತಿದ್ದ ಕೆಲಸಕ್ಕೂ ಈಗ ದೀರ್ಘಕಾಲ ಸಾಲಿನಲ್ಲಿ ನಿಲ್ಲಬೇಕಾಗಿದೆ’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಇಂಟರ್‌ನೆಟ್‌ನಿಂದ ಆಗಬಹುದಾಗಿದ್ದ ಕೆಲಸಕ್ಕಾಗಿ ಈಗ ನಾನು ದೂರವಾಣಿ ಬಳಸಬೇಕಾಗಿದೆ ಅಥವಾ ಇತರೆ ಮಾರ್ಗಗಳ ಮೂಲಕವೇ ಮಾಡಿಕೊಳ್ಳುತ್ತಿದ್ದೇನೆ.ಆದರೆ, ನಮಗೆ ಬೇರೆ ಆಯ್ಕೆ ಇಲ್ಲ’ ಎಂದು30 ವರ್ಷ ವಯಸ್ಸಿನ ಮಹಿಳೆ ಅಸ್ಗರಿ ಎನ್ನುವವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.