
ಪ್ರಜಾವಾಣಿ ವಾರ್ತೆ
ಟೆಹರಾನ್: ಇಸ್ರೇಲ್‌ನ ಗುಪ್ತಚರ ಮತ್ತು ಸೇನೆಗಾಗಿ ಬೇಹುಗಾರಿಕೆ ನಡೆಸಿದ ಆರೋಪದಡಿ ವ್ಯಕ್ತಿಯೊಬ್ಬರನ್ನು ಶನಿವಾರ ಗಲ್ಲಿಗೇರಿಸಲಾಗಿದೆ.
ಅಘಿಲ್ ಕೇಶವರ್ಜ್ (27) ಮರಣದಂಡನೆಗೊಳಗಾದ ವ್ಯಕ್ತಿ ಎಂದು ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ. ಈತ ಮೊಸಾದ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಉರ್ಮಿಯಾದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಛಾಯಾಚಿತ್ರಗಳನ್ನು ತೆಗೆಯುವಾಗ ಅಘಿಲ್‌ನನ್ನು ಬಂಧಿಸಲಾಗಿತ್ತು. ಟೆಹರಾನ್ ಸೇರಿದಂತೆ ಇರಾನ್‌ನ ವಿವಿಧ ನಗರಗಳಲ್ಲಿ ಮೊಸಾದ್‌ಗಾಗಿ ಈತ ಇಂತಹ ಇನ್ನೂರಕ್ಕೂ ಹೆಚ್ಚು ಕೆಲಸ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಈತನ ವಿಚಾರಣೆ ನಡೆಸಿ, ಮರಣದಂಡನೆ ವಿಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಸಹ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.