ಗಲ್ಲು
ದುಬೈ: ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪ ಹೊತ್ತಿರುವ ಬಹ್ಮನ್ ಚೂಬಿಯಾಸ್ಲ್ ಎಂಬವರನ್ನು ಸೋಮವಾರ ಗಲ್ಲಿಗೇರಿಸಲಾಗಿದೆ ಎಂದು ಇರಾನ್ ತಿಳಿಸಿದೆ.
ಇಸ್ರೇಲ್‌ನ ಗೂಢಚಾರ ಸಂಸ್ಥೆ ‘ಮೊಸಾದ್’ನ ಅಧಿಕಾರಿಗಳನ್ನು ಚೂಬಿಯಾಸ್ಲ್ ಭೇಟಿ ಮಾಡಿದ್ದರು ಎಂದು ಇರಾನ್ ಆರೋಪಿಸಿದೆ. ‘ಚೂಬಿಯಾಸ್ಲ್ ಸೂಕ್ಷ್ಮ ಟೆಲಿಕಮ್ಯುನಿಕೇಷನ್ ಯೋಜನೆಗಳಲ್ಲಿ ಕೆಲಸ ಮಾಡಿದ್ದಾನೆ. ಎಲೆಕ್ಟ್ರಾನಿಕ್ ಸಾಧನಗಳನ್ನು ಆಮದು ಮಾಡಿಕೊಳ್ಳುವ ಮಾರ್ಗಗಳ ಬಗ್ಗೆ ವರದಿ ಮಾಡಿದ್ದಾನೆ’ ಎಂದು ಇರಾನ್‌ನ ಮಿಜಾನ್ ಸುದ್ದಿ ಸಂಸ್ಥೆಯು ಹೇಳಿದೆ.
ಗಲ್ಲಿಗೇರಿಸುವ ಕುರಿತು ಇರಾನಿನ ಮಾಧ್ಯಮಗಳಿಗೆ ಅಥವಾ ಇಸ್ಲಾಮಿಕ್ ಗಣರಾಜ್ಯದಲ್ಲಿ ಮರಣದಂಡನೆಯ ಮೇಲ್ವಿಚಾರಣೆ ನಡೆಸುವ ಕಾರ್ಯಕರ್ತರಿಗೆ ತಕ್ಷಣಕ್ಕೆ ತಿಳಿದಿರಲಿಲ್ಲ. ಈ ವಾರಾಂತ್ಯದಲ್ಲಿ ತನ್ನ ಪರಮಾಣು ಕಾರ್ಯಕ್ರಮಕ್ಕಾಗಿ ಟೆಹ್ರಾನ್ ಮೇಲೆ ವಿಶ್ವಸಂಸ್ಥೆಯು ಮತ್ತೆ ನಿರ್ಬಂಧಗಳನ್ನು ಹೇರಿದ್ದು, ಇರಾನ್ ತನ್ನ ಶತ್ರುಗಳ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ ನಂತರ ಈ ಮರಣದಂಡನೆಗೆ ಗುರಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.