ಟೆಹ್ರಾನ್: 2017ರಲ್ಲಿ ಇರಾನ್‌ನಲ್ಲಿ ನಡೆದಿದ್ದ ಆರ್ಥಿಕ ಪ್ರತಿಭಟನೆಗೆ ಪ್ರಚೋಚದನೆ ನೀಡಿದ ಆರೋಪದಲ್ಲಿ ಪತ್ರಕರ್ತ ರುಹೋಲ್ಲಾ ಝಾಮ್‌ಗೆ ಮರಣದಂಡನೆ ವಿಧಿಸಲಾಗಿದೆ. ರುಹೋಲ್ಲಾ ಇತ್ತೀಚೆಗೆ ಪ್ಯಾರಿಸ್‌ನಿಂದ ಟೆಹ್ರಾನ್‌ಗೆ ಗಡಿಪಾರಾಗಿದ್ದಾರೆ.
ಈ ಕುರಿತು ಇರಾನ್‌ನ ನ್ಯಾಯಾಂಗ ವಕ್ತಾರ ಘೋಲಮ್‌ಹೋಸಿನ್ ಎಸ್ಮಾಯಿಲ್ ಮಂಗಳವಾರ ಅಧಿಕೃತ ಘೋಷಣೆ ಮಾಡಿದ್ದಾರೆ.
ರುಹೋಲ್ಲಾ ಅವರು ‘ಅಮದ್‌ನ್ಯೂಸ್’ ಹೆಸರಿನ ಜಾಲತಾಣ ನಡೆಸುತ್ತಿದ್ದು, ಇರಾನ್ ಅಧಿಕಾರಿಗಳನ್ನು ಮುಜುಗರಕ್ಕೀಡುಮಾಡುವಂತಹ ವಿಡಿಯೊ, ಸುದ್ದಿಗಳನ್ನು ಪ್ರಕಟಿಸಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.