ADVERTISEMENT

ಇರಾನ್– ಅಮೆರಿಕ–ಇಸ್ರೇಲ್ ಯುದ್ಧ ಸೇರಿದಂತೆ ಈ ದಿನದ ಟಾಪ್ 10 ಸುದ್ದಿಗಳು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 14:32 IST
Last Updated 2 ಮಾರ್ಚ್ 2026, 14:32 IST
<div class="paragraphs"><p>ಈ ದಿನದ ಪ್ರಮುಖ 10 ಸುದ್ದಿಗಳು</p></div>

ಈ ದಿನದ ಪ್ರಮುಖ 10 ಸುದ್ದಿಗಳು

   

ಇರಾನ್– ಅಮೆರಿಕ–ಇಸ್ರೇಲ್ ಯುದ್ಧ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

ಎಚ್.ಡಿ. ಕುಮಾರಸ್ವಾಮಿ – ಶಾಸಕ ಕೆ.ಎಂ.ಉದಯ

ADVERTISEMENT

ಮದ್ದೂರು: ‘ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ’ ಎಂದು ಶಾಸಕ ಕೆ.ಎಂ.ಉದಯ ಆರೋಪ ಮಾಡಿದರು.

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ನಮ್ಮ ಆದ್ಯತೆ: CM

ಸಿದ್ದರಾಮಯ್ಯ

ಬೆಂಗಳೂರು: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್‌ ನಡೆಸಿದ ದಾಳಿ ಬಳಿಕ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಕನ್ನಡಿಗರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಶ್ಮೀರದ ಹಲವು ಕಡೆಗಳಲ್ಲಿ ಕಠಿಣ ನಿರ್ಬಂಧ

ಖಮೇನಿ ಹತ್ಯೆ ಖಂಡಿಸಿ ಘಂಟಾ ಘರ್‌ನಲ್ಲಿ ನಡೆದಿದ್ದ ಪ್ರತಿಭಟನೆ

ಶ್ರೀನಗರ: ಇರಾನ್ ಸರ್ವೊಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆ ಬಳಿಕ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಕಾಶ್ಮೀರದಲ್ಲಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ನೇತನ್ಯಾಹು ಜೊತೆ ಮೋದಿ ದೂರವಾಣಿ ಸಂಭಾಷಣೆ: ಯುದ್ಧದ ಬಗ್ಗೆ ಕಳವಳ

ಪ್ರಧಾನಿ ನರೇಂದ್ರ ಮೋದಿ  ಹಾಗೂ  ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು  

ನವದೆಹಲಿ: ಪಶ್ಚಿಮ ಎಷ್ಯಾದಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಜೊತೆ ಚರ್ಚಿಸಿದ್ದಾರೆ.

ನಮ್ಮಲ್ಲಿ ಅಮೆರಿಕದ ಹಲವು ಮಿಲಿಟರಿ ವಿಮಾನಗಳಿಗೆ ಹಾನಿಯಾಗಿದೆ: ಕುವೈತ್ ಸೇನೆ

ಕುವೈತ್ ಎಂಬಸಿ ಬಳಿ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ

ಬೆಂಗಳೂರು: ತನ್ನ ದೇಶದಲ್ಲಿ ಅಮೆರಿಕದ ಹಲವಾರು ಮಿಲಿಟರಿ ವಿಮಾನಗಳಿಗೆ ಭಾರಿ ಹಾನಿಯಾಗಿದೆ ಎಂದು ಕುವೈತ್ ಸೇನೆಯ ವಕ್ತಾರರು ತಿಳಿಸಿದ್ದಾರೆ. ಕುರಿತು ಎಕ್ಸ್‌ನಲ್ಲಿ ಪ್ರಕಟಣೆ ಬಿಡುಗಡೆ ಮಾಡಿರುವ ಕುವೈತ್ ಸೇನೆಯ ವಕ್ತಾರರು, ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಅಮೆರಿಕದ ಹಲವಾರು ಮಿಲಿಟರಿ ವಿಮಾನಗಳು ಧ್ವಂಸಕ್ಕೆ ಒಳಗಾಗಿವೆ. ಇನ್ನೂ ಕೆಲವಕ್ಕೆ ಹಾನಿಯಾಗಿದೆ. ಆ ದೇಶದ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದುಬೈನಲ್ಲಿ ಸಿಲುಕಿರುವ ರಾಜ್ಯ ಚುನಾವಣಾ ಆಯುಕ್ತಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ

ಎಸ್. ಸಂಗ್ರೇಶಿ

ಬೆಂಗಳೂರು: ರಾಜ್ಯ ಚುನಾವಣಾ ಆಯುಕ್ತ ಎಸ್. ಸಂಗ್ರೇಶಿಯವರು ದುಬೈನಲ್ಲಿ ಸಿಲುಕಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದ ದೇಶಗಳಲ್ಲಿ ವಿಮಾನ ಸಂಚಾರ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅವರು ಮರಳಿ ಬರಲಾಗದೆ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ.

ಕುರಿಗಾಹಿನ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!

ಕುರಿಗಾಹಿನ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗುಡೇಕೋಟೆಯ ಹಾಲಸಾಗರ ಬಳಿ ಸೋಮವಾರ ಮಧ್ಯಾಹ್ನ ಮೇಕೆ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ಸ್ಥಳದಲ್ಲೇ ಸಾಯಿಸಿದೆ. ಇದರಿಂದ ರೊಚ್ಚಿಗೆದ್ದ ಜನರು ಅದೇ ಕರಡಿಯನ್ನು ಹೊಡೆದು ಕೊಂದಿದ್ದಾರೆ.

ಇರಾನ್ ವಿಷ ಸರ್ಪ, ಅದರ ಹೆಡೆಯನ್ನೇ ಕತ್ತರಿಸಿ ಬಿಸಾಕಿದ್ದೇವೆ: ಅಮೆರಿಕ ಸೇನೆ ಆರ್ಭಟ

ಇರಾನ್ ಮೇಲೆ ಅಮೆರಿಕ ದಾಳಿ

ಬೆಂಗಳೂರು: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ನಡೆದ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ.

ನಾಗ್ಪುರ ಕಾರ್ಖಾನೆ ಸ್ಫೋಟ ಪ್ರಕರಣ: ಕಂಪನಿಯ ಒಂಬತ್ತು ನಿರ್ದೇಶಕರ ಬಂಧನ

ಸ್ಫೋಟ ಸಂಭವಿಸಿದ ಸ್ಫೋಟಕ ತಯಾರಿಕಾ ಕಾರ್ಖಾನೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ, ಸ್ಫೋಟಕ ತಯಾರಿಕಾ ಕಂಪನಿಯ ಒಂಬತ್ತು ಮಂದಿ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ.

ಇಸ್ರೇಲ್–ಅಮೆರಿಕ ದಾಳಿಯಲ್ಲಿ ಗಾಯಗೊಂಡಿದ್ದ ಖಮೇನಿ ಪತ್ನಿ ಮನ್ಸೌರೆ ಖೋಜಾಸ್ತೆ ಸಾವು

ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ

ಬೆಂಗಳೂರು: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ನಡೆದ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.