

ಅಮೆರಿಕ ಧ್ವಜ
ಕೈರೊ: ‘ತನ್ನ ನೆಲದ ಮೇಲೆ ಅಮೆರಿಕವು ದಾಳಿ ನಡೆಸಿದರೆ, ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗುವುದು’ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಎಚ್ಚರಿಕೆ ನೀಡಿದ್ದಾರೆ.
‘ಒಮಾನ್‌ನಲ್ಲಿ ಶುಕ್ರವಾರ ನಡೆದ ಸಕಾರಾತ್ಮಕ ಚರ್ಚೆಗಳ ನಂತರ, ಅಣ್ವಸ್ತ್ರ ಕುರಿತು ಪರೋಕ್ಷವಾಗಿ ಮಾತುಕತೆ ನಡೆಸಲು ಇರಾನ್ ಹಾಗೂ ಅಮೆರಿಕ ಸಮ್ಮತಿ ಸೂಚಿಸಿವೆ’ ಎಂದು ಕತಾರ್‌ನ ‘ಅಲ್ ಜಜಿರಾ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಮುಂದಿನ ಹಂತದ ಮಾತುಕತೆಯ ಕುರಿತಂತೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರದಲ್ಲೇ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಆದಷ್ಟು ಬೇಗ ಮಾತುಕತೆ ಆರಂಭವಾಗಲಿದೆ ಎಂಬ ವಿಶ್ವಾಸವನ್ನು ಉಭಯ ದೇಶಗಳು ಹೊಂದಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.