ADVERTISEMENT

Israel-Iran | ನಮ್ಮ ಮುಂದೆ ಎಲ್ಲಾ ಆಯ್ಕೆಗಳಿವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಏಜೆನ್ಸೀಸ್
Published 19 ಜೂನ್ 2025, 9:13 IST
Last Updated 19 ಜೂನ್ 2025, 9:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಟೆಹರಾನ್: ಮಿತ್ರ ರಾಷ್ಟ್ರ ಇಸ್ರೇಲ್ ಬೆಂಬಲಿಸಿ ಯುದ್ಧದಲ್ಲಿ ಮಧ್ಯಪ್ರವೇಶಿಸುವ ಅಮೆರಿಕದ ಪ್ರಯತ್ನಕ್ಕೆ ಇರಾನ್ ಎಚ್ಚರಿಕೆ ನೀಡಿದೆ. ಯದ್ಧದಲ್ಲಿ ಇಸ್ರೇಲ್ ಅನ್ನು ಬೆಂಬಲಿಸಿದರೆ ಪ್ರತಿರೋಧ ಒಡ್ಡಲು ನಾವು ಸಿದ್ಧ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಹೇಳಿದ್ದಾರೆ.

ADVERTISEMENT

‘ಯಹೂದಿ ಆಡಳಿತದ ಪರವಾಗಿ ಅಮೆರಿಕ ಯುದ್ಧದಲ್ಲಿ ಸಕ್ರಿಯವಾಗಿ ಪ್ರವೇಶಿಸಲು ಬಯಸಿದರೆ, ಆಕ್ರಮಣಕಾರರಿಗೆ ಪಾಠ ಕಲಿಸಲು, ರಾಷ್ಟ್ರೀಯ ಭದ್ರತೆ ಹಾಗೂ ಹಿತಾಸಕ್ತಿಯನ್ನು ರಕ್ಷಿಸಲು ಇರಾನ್ ತನ್ನ ಆಯುಧಗಳನ್ನು ಬಳಸಬೇಕಾಗುತ್ತದೆ’ ಎಂದು ಕಾಝೆಂ ಘರಿಬಾಬಾದಿ ಎಚ್ಚರಿಕೆ ನೀಡಿದ್ದಾರೆ.

ಸೇನಾ ತೀರ್ಮಾನವನ್ನು ಮಾಡುವ ಅಧಿಕಾರಿಗಳಿಗೆ ಎಲ್ಲಾ ಆಯ್ಕೆಗಳು ಮುಂದಿವೆ ಎಂದು ಅವರು ಹೇಳಿದ್ದಾಗಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಇಸ್ರೇಲ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದ ಬೆನ್ನಲ್ಲೇ ಆಪರೇಷನ್ 'ಟ್ರು ಪ್ರಾಮಿಸ್ 3' ಕಾರ್ಯಾಚರಣೆಯ 12ನೇ ಅಲೆಯ ಭಾಗವಾಗಿ ಅತಿ ಭಾರದ, ದೀರ್ಘ ಶ್ರೇಣಿಯ ಎರಡು ಹಂತದ ಸಿಜ್ಜಿಲ್ ಕ್ಷಿಪಣಿಗಳ (Sejjil) ದಾಳಿಯನ್ನು ಪ್ರಾರಂಭಿಸಿರುವುದಾಗಿ ಇರಾನ್ ಹೇಳಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.