ADVERTISEMENT

ಡಾಲರ್‌ ಎದುರು ರಿಯಾಲ್‌ ಮೌಲ್ಯ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:24 IST
Last Updated 27 ಜನವರಿ 2026, 16:24 IST
   

ದುಬೈ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರತಿಭಟನೆಗಳು ಭುಗಿಲೆದ್ದಿರುವ ಇರಾನ್‌ನಲ್ಲಿ ‘ರಿಯಾಲ್‌’ನ ವಿನಿಮಯ ಮೌಲ್ಯವು ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಒಂದು ಡಾಲರ್‌ಗೆ 15 ಲಕ್ಷ ರಿಯಾಲ್‌ ಸಮ ಎಂಬ ಸ್ಥಿತಿಗೆ ತಲುಪಿದೆ. 

ಪರಮಾಣು ಕಾರ್ಯಕ್ರಮವೂ ಸೇರಿದಂತೆ ವಿವಿಧ ವಿಚಾರಗಳಿಂದಾಗಿ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಇರಾನ್‌ ಎದುರಿಸುತ್ತಿರುವ ಕಾರಣ ರಿಯಾಲ್‌ ಮೌಲ್ಯದಲ್ಲಿ ಗಣನೀಯ ಕುಸಿತ ದಾಖಲಾಗುತ್ತಿದೆ ಎನ್ನಲಾಗಿದೆ. 

ಡಿಸೆಂಬರ್‌ 28ರಂದು ‍ಪ್ರತಿಭಟನೆಗಳು ಆರಂಭಗೊಂಡು ದೇಶದಾದ್ಯಂತ ವ್ಯಾಪಿಸಿ, ಹಿಂಸಾಚಾರಕ್ಕೆ ತಿರುಗಿತು. ಇದರಿಂದ 6,126 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.