ADVERTISEMENT

ಬೈಡನ್‌ ಭೇಟಿ ಉದ್ದೇಶವಿಲ್ಲ: ಇರಾನ್‌ ನಿಯೋಜಿತ ಅಧ್ಯಕ್ಷ ಇಬ್ರಾಹಿಂ ರೈಸಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 11:47 IST
Last Updated 21 ಜೂನ್ 2021, 11:47 IST
ಇಬ್ರಾಹಿಂ ರೈಸಿ
ಇಬ್ರಾಹಿಂ ರೈಸಿ   

ದುಬೈ (ಎ.ಪಿ): ‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿಯಾಗುವ ಉದ್ದೇಶವಿಲ್ಲ’ ಎಂದು ಇರಾನ್‌ನ ನಿಯೋಜಿತ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.

ಬೈಡನ್‌ ಭೇಟಿ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ‘ಇಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದಾರೆ. 1988ರಲ್ಲಿ ನಡೆದಿದ್ದ 5,000 ಜನರ ಸಾಮೂಹಿಕ ಮರಣದಂಡನೆ ಘಟನೆಯಲ್ಲಿ ನಿಮ್ಮ ನೇರ ಪಾತ್ರವಿತ್ತೆ ಎಂಬ ಪ್ರಶ್ನೆಗೆ, ‘ನಾನು ಮಾನವ ಹಕ್ಕುಗಳ ಸಮರ್ಥಕ’ ಎಂದೂ ಹೇಳಿಕೊಂಡಿದ್ದಾರೆ.

1980ರ ಇರಾನ್‌– ಇರಾಕ್‌ ಯುದ್ಧದ ಸಂದರ್ಭದಲ್ಲಿ ಬಂಧಿಯಾಗಿದ್ದ ರಾಜಕೀಯ ಕೈದಿಗಳಿಗೆ ಸಾಮೂಹಿಕ ಮರಣದಂಡನೆ ಘೋಷಿಸಿದ ಸಮಿತಿಯಲ್ಲಿ ರೈಸಿ ಅವರು ಇದ್ದರು. ಶುಕ್ರವಾರ ನಡೆದಿದ್ದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ವಿಜಯಿಯಾಗಿದ್ದ ರೈಸಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.