ADVERTISEMENT

ಇರಾಕ್‌ ಮಾಲ್‌ನಲ್ಲಿ ಬೆಂಕಿ ಅವಘಡ: 61 ಮಂದಿ ಸಾವು 

ಏಜೆನ್ಸೀಸ್
Published 17 ಜುಲೈ 2025, 6:19 IST
Last Updated 17 ಜುಲೈ 2025, 6:19 IST
<div class="paragraphs"><p>ಇರಾಕ್‌ ಶಾಪಿಂಗ್‌ ಮಾಲ್‌ನಲ್ಲಿ ಸಂಭವಿಸಿರುವ&nbsp;ಬೆಂಕಿ ಅವಘಡ&nbsp;</p></div>

ಇರಾಕ್‌ ಶಾಪಿಂಗ್‌ ಮಾಲ್‌ನಲ್ಲಿ ಸಂಭವಿಸಿರುವ ಬೆಂಕಿ ಅವಘಡ 

   

ಬಾಗ್ದಾದ್‌: ಪೂರ್ವ ಇರಾಕ್‌ನ ವಸೀತ್‌ ಪ್ರಾಂತ್ಯದಲ್ಲಿ ನೂತನವಾಗಿ ತೆರೆದಿದ್ದ ಮಾಲ್‌ ಒಂದರದಲ್ಲಿ  ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 61 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಬುಧವಾರ ಬೆಂಕಿ ಅಪಘಾತ ಸಂಭವಿಸಿದ್ದು, ಬಹುತೇಕ ಮಂದಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. 14 ಮಂದಿಯ ಮೃತ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ ಎಂದು ಇರಾಕ್‌ನ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. 

ADVERTISEMENT

 5 ಅಂತಸ್ತಿನ ಮಾಲ್‌ ಕಟ್ಟಡ ಇದಾಗಿದ್ದು, ವಾರದ ಹಿಂದಷ್ಟೇ ಉದ್ಘಾಟನೆಗೊಂಡಿತ್ತು. ಮಾಲ್‌ನ ಒಳಗೆ ಸಿಲುಕಿದ್ದ 45 ಮಂದಿಯನ್ನು ರಕ್ಷಿಸಲಾಗಿದೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ‍ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.