ADVERTISEMENT

ಬಾಗ್ದಾದ್: ವಿಮಾನ ನಿಲ್ದಾಣ ಬಳಿ 3 ರಾಕೆಟ್‌ಗಳಿಂದ ದಾಳಿ

ಪಿಟಿಐ
Published 28 ಜನವರಿ 2022, 12:20 IST
Last Updated 28 ಜನವರಿ 2022, 12:20 IST
ವಿಮಾನ ನಿಲ್ದಾಣ ಹಾಗೂ ಸೇನಾ ನೆಲೆಯನ್ನು ಗುರಿಯಾಗಿಸಿ ರಾಕೆಟ್‌ ದಾಳಿ ನಡೆದ ಹಿನ್ನೆಲೆಯಲ್ಲಿ ಇರಾಕ್‌ ರಾಜಧಾನಿ ಬಾಗ್ದಾದ್‌ ನಗರದಲ್ಲಿ ಶುಕ್ರವಾರ ಕಟ್ಟೆಚ್ಚರ ಘೋಷಿಸಲಾಗಿದ್ದು ಚೆಕ್‌ಪಾಯಿಂಟ್‌ಯೊಂದರಲ್ಲಿ ಯೋಧರು ಕಾವಲು ಕಾಯುತ್ತಿದ್ದರು –ಎಎಫ್‌ಪಿ ಚಿತ್ರ

ಬಾಗ್ದಾದ್‌: ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅದಕ್ಕೆ ಹೊಂದಿಕೊಂಡು ಇರುವ ಸೇನಾ ನೆಲೆ ಸಮೀಪ ಕನಿಷ್ಠ ಮೂರು ರಾಕೆಟ್‌ಗಳಿಂದ ಶುಕ್ರವಾರ ದಾಳಿ ನಡೆದಿದೆ ಎಂದು ಇರಾಕ್‌ ಅಧಿಕಾರಿಗಳು ಹೇಳಿದ್ದಾರೆ.

ಸೇನಾ ನೆಲೆಯಲ್ಲಿ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಯೋಧರು ಹಾಗೂ ಮಿಲಿಟರಿ ಸಲಹೆಗಾರರು ಇದ್ದು, ಸದ್ಯ ಬಳಕೆ ಮಾಡದ ವಾಣಿಜ್ಯ ವಿಮಾನವೊಂದು ಈ ದಾಳಿಯಲ್ಲಿ ಹಾನಿಗೊಳಗಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬೆಳಗಿನ ಅವಧಿಯಲ್ಲಿ ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ. ವಿಮಾನ ನಿಲ್ದಾಣದ ನಾಗರಿಕ ಹಾಗೂ ಮಿಲಿಟರಿ ಪ್ರದೇಶಗಳ ನಡುವಿನ ಜಾಗಕ್ಕೆ ರಾಕೆಟ್‌ಗಳು ಅಪ್ಪಳಿಸಿವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ನಾಗರಿಕ ವಿಮಾನಗಳ ಹಾರಾಟಕ್ಕೆ ಈ ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ’ ಎಂದು ಇರಾಕಿ ಏರವೇಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.