ಡಬ್ಲಿನ್: ಐರ್ಲೆಂಡ್ ಪ್ರಧಾನಿ ಲಿಯೊ ವಾರಡ್ಕರ್ ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿ ಆಯ್ಕೆಯಾಗುವವರೆಗೆ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ.
ಮೂರು ಪ್ರಮುಖ ಪಕ್ಷಗಳ ನಡುವೆ ಪ್ರಧಾನಿ ಹುದ್ದೆಗೆ ತೀವ್ರ ಪೈಪೋಟಿ ನಡೆದಿದ್ದರೂ ಯಾರಿಗೂ ಬಹುಮತ ಲಭಿಸಿಲ್ಲ. ಈ ಪ್ರಕ್ರಿಯೆಯನ್ನು ಮಾರ್ಚ್ 5ರ ವರೆಗೆ ಮುಂದೂಡಲಾಗಿದೆ.
ಫೆಬ್ರುವರಿ 8ರಂದು ನಡೆದ ಚುನಾವಣೆಯ ನಂತರ ಸಂಸತ್ತಿನ ಕೆಳಮನೆಯಲ್ಲಿ ನಡೆದ ಮೊದಲ ಅಧಿವೇಶನದ ಬಳಿಕ ವಾರಡ್ಕರ್ ಅವರು ಅಧ್ಯಕ್ಷ ಮೈಕಲ್ ಹಿಗಿನ್ಸ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.